ಸಂನ್ಯಾಸಿಗಳ ಪ್ರವಾಸಗಳು ಮತ್ತು ಕ್ರಿಯಾ ಸಮಾರಂಭಗಳು

ಅತ್ಯಂತ ಸಂತೋಷದಿಂದ, ನಾವು ನಿಮಗೆ ವಿವಿಧ ಕಾರ್ಯಕ್ರಮಗಳ ಕುರಿತು ತಿಳಿಸುತ್ತಿದ್ದೇವೆ: 2024 ನೇ ವರ್ಷದಲ್ಲಿ, ಸಂಗಮಗಳು, ಧ್ಯಾನ ಶಿಬಿರಗಳು ಮತ್ತು ವೈಎಸ್‌ಎಸ್ ಸಂನ್ಯಾಸಿಗಳ ಪ್ರವಾಸ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸಂಪೂರ್ಣ ವೇಳಾಪಟ್ಟಿಯನ್ನು ಇಲ್ಲಿ ವೀಕ್ಷಿಸಿ.

Satsanga on Yogananda's teachings.ಪ್ರತಿ ವರ್ಷ ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾದ ಸಂನ್ಯಾಸಿಗಳು ಪರಮಹಂಸ ಯೋಗಾನಂದರ ಆತ್ಮ-ವಿಮೋಚನಾ ಬೋಧನೆಗಳಿಗೆ ನಿರಂತರವಾಗಿ ಬೆಳೆಯುತ್ತಿರುವ ಬೇಡಿಕೆಯನ್ನು ಪೂರೈಸುವುದಕ್ಕಾಗಿ ದೇಶಾದ್ಯಂತ ನಗರಗಳಿಗೆ ಭೇಟಿ ನೀಡುತ್ತಾರೆ. ಅವರು ವಾರಾಂತ್ಯದ ಧ್ಯಾನ ಶಿಬಿರಗಳು ಮತ್ತು ಸ್ಫೂರ್ತಿದಾಯಕ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಾರೆ. ಇದರಲ್ಲಿ ಪರಮಹಂಸಜಿಯವರ “ಬದುಕುವುದು-ಹೇಗೆ” ಬೋಧನೆಗಳು, ವೈಎಸ್ಎಸ್ ಯೋಗ ತಂತ್ರಗಳ ಪುನರಾವಲೋಕನ, ಸಮೂಹ ಧ್ಯಾನಗಳು, ದಿವ್ಯಗೀತೆಗಳ ಗಾಯನ, ಶ್ರವಣ-ದೃಶ್ಯ ಪ್ರಸ್ತುತಿಗಳು ಮತ್ತು ಕ್ರಿಯಾ ಯೋಗ ದೀಕ್ಷಾ ಸಮಾರಂಭಗಳು ಸೇರಿರುತ್ತವೆ.

Swami Smaranananda giving a talk.ಉಪನ್ಯಾಸ ಪ್ರವಾಸಗಳು ಹೊಸಬರಿಗೆ ಪರಮಹಂಸ ಯೋಗಾನಂದರ ಬೋಧನೆಗಳ ಪರಿಚಯವನ್ನು ನೀಡುತ್ತವೆ ಮತ್ತು ಪಾಠಗಳ ವಿದ್ಯಾರ್ಥಿಗಳಿಗೆ ವೈಎಸ್‌ಎಸ್‌ ಧ್ಯಾನ ತಂತ್ರಗಳಲ್ಲಿ ಆಳವಾದ ಮಾರ್ಗದರ್ಶನವನ್ನು ನೀಡುತ್ತವೆ. ಸದಸ್ಯರಿಗೆ ಆಯೋಜಿತವಾದ ಕಾರ್ಯಕ್ರಮಗಳು ಮತ್ತು ಪ್ರಾದೇಶಿಕ ಧ್ಯಾನ ಶಿಬಿರಗಳು, ವೈಎಸ್‌ಎಸ್‌ ಧ್ಯಾನ ತಂತ್ರಗಳ ಬಗೆಗಿನ ತರಗತಿಗಳನ್ನು ಒಳಗೊಂಡಿರುತ್ತವೆ ಹಾಗೂ ಸಮೂಹ ಧ್ಯಾನ ಮತ್ತು ಸತ್ಸಂಗಕ್ಕೆ ಅವಕಾಶಗಳನ್ನು ಒದಗಿಸುತ್ತವೆ. ಕಾರ್ಯಕ್ರಮಗಳು ಪರಮಹಂಸ ಯೋಗಾನಂದರ ಬೋಧನೆಗಳ ಇತರ ಪ್ರಮುಖ ಅಂಶಗಳನ್ನೂ ಒಳಗೊಂಡಿರುತ್ತವೆ, ಅವುಗಳೆಂದರೆ:

• ದೈನಂದಿನ ಜೀವನದಲ್ಲಿ ಧ್ಯಾನದ ಮಹತ್ವ
• ಹೆಚ್ಚಿನ ಸಾಮರಸ್ಯದ ಜೀವನವನ್ನು ಹೇಗೆ ನಡೆಸುವುದು
• ಆಂತರಿಕ ಅಗತ್ಯಗಳನ್ನು ಹೊರಗಿನ ಬೇಡಿಕೆಗಳೊಂದಿಗೆ ಸಮತೋಲನಗೊಳಿಸಲು ಕಲಿಯುವುದು

ಮೌನದ ಆಂತರಿಕ ಮಂದಿರವನ್ನು ನಿರ್ಮಿಸಲು ನಮ್ಮನ್ನು ಪ್ರೇರೇಪಿಸುತ್ತಾ, ನಮ್ಮ ಪ್ರೀತಿಯ ಗುರುದೇವರು ಹೇಳಿದ್ದಾರೆ: “ನಿಮ್ಮ ಮನಸ್ಸಿನ ಬಾಗಿಲುಗಳ ಹಿಂದಿನ ಮೌನದಲ್ಲಿ ಎಂತಹ ಸಂತೋಷವು ಆವಿಷ್ಕಾರಕ್ಕಾಗಿ ಕಾಯುತ್ತಿದೆ ಎಂಬುದನ್ನು ಯಾವುದೇ ಮಾನವ ನುಡಿಗಳಲ್ಲಿ ಹೇಳಲು ಸಾಧ್ಯವಿಲ್ಲ. ಆದರೆ ನೀವು ಧ್ಯಾನ ಮಾಡಿ ಆ ವಾತಾವರಣವನ್ನು ಸೃಷ್ಟಿಸಿಕೊಳ್ಳಬೇಕು. ಆಳವಾಗಿ ಧ್ಯಾನಿಸುವವರು ಅದ್ಭುತವಾದ ಆಂತರಿಕ ಶಾಂತತೆಯನ್ನು ಅನುಭವಿಸುತ್ತಾರೆ.” ಈ ಕಾರ್ಯಕ್ರಮಗಳು, ಪ್ರಾಮಾಣಿಕ ಸಾಧಕರು ದೈನಂದಿನ ಜೀವನದ ನಿರಂತರ ಚಟುವಟಿಕೆಯಿಂದ ತಮ್ಮ ಗಮನವನ್ನು ಹಿಂತೆಗೆದುಕೊಳ್ಳಲು ಮತ್ತು ಅದನ್ನು ಆಂತರಿಕ ಮೌನದ ಮೇಲೆ ಕೇಂದ್ರೀಕರಿಸಲು ಮತ್ತು ಆ ಮೂಲಕ ಭಗವಂತನ ಶಾಂತಿ ಮತ್ತು ಆನಂದದ ಅಮೃತವನ್ನು ಸೇವಿಸಲು ಅದ್ಭುತ ಅವಕಾಶವನ್ನು ಒದಗಿಸುತ್ತವೆ.

ಜನವರಿ — ಡಿಸೆಂಬರ್ 2024 ರ ಅವಧಿಯಲ್ಲಿ ಸಂನ್ಯಾಸಿಗಳ ಪ್ರವಾಸಗಳ ವಿವರಗಳನ್ನು ವೀಕ್ಷಿಸಲು ದಯವಿಟ್ಟು ಇಲ್ಲಿ ಒತ್ತಿ.

ಸಂನ್ಯಾಸಿಗಳ ಪ್ರವಾಸಗಳು ಮತ್ತು ಧ್ಯಾನ ಶಿಬಿರಗಳು, ಜುಲೈ – ಡಿಸೆಂಬರ್‌ 2024

ರಾಜ್ಯ

ದಿನಾಂಕ

ಸ್ಥಳ

ಕಾರ್ಯಕ್ರಮದ ಮಾದರಿ

ಆಂಧ್ರ ಪ್ರದೇಶ

ಡಿಸೆಂಬರ್‌ 13-15

ಕಾಕಿನಾಡ

ಕ್ರಿಯಾ ಯೋಗ ದೀಕ್ಷೆಯನ್ನು ಒಳಗೊಂಡಿರುತ್ತದೆ

ಗುಜರಾತ್

ಸೆಪ್ಟೆಂಬರ್‌ 20-22

ವಡೋದರಾ

ಕ್ರಿಯಾ ಯೋಗ ದೀಕ್ಷೆಯನ್ನು ಒಳಗೊಂಡಿರುತ್ತದೆ

ಹಿಮಾಚಲ ಪ್ರದೇಶ

ಜುಲೈ 26-28

ಸೋಲನ್

ಕ್ರಿಯಾ ಯೋಗ ದೀಕ್ಷೆಯನ್ನು ಒಳಗೊಂಡಿರುತ್ತದೆ

ಆಗಸ್ಟ್‌ 31-ಸೆಪ್ಟೆಂಬರ್‌ 1

ಪಾಲಂಪುರ್

ಎರಡು ದಿನಗಳ ಕಾರ್ಯಕ್ರಮ

ಜಮ್ಮು

ನವೆಂಬರ್‌ 22-24

ಜಮ್ಮು

ಕ್ರಿಯಾ ಯೋಗ ದೀಕ್ಷೆಯನ್ನು ಒಳಗೊಂಡಿರುತ್ತದೆ

ಕರ್ನಾಟಕ

ಆಗಸ್ಟ್‌ 10-11

ಧಾರವಾಡ

ಕ್ರಿಯಾ ಯೋಗ ದೀಕ್ಷೆಯನ್ನು ಒಳಗೊಂಡಿರುತ್ತದೆ

ಮಧ್ಯ ಪ್ರದೇಶ

ನವೆಂಬರ್‌ 29-ಡಿಸೆಂಬರ್‌ 1

ಜಬ್ಬಲ್‌ಪುರ

ಕ್ರಿಯಾ ಯೋಗ ದೀಕ್ಷೆಯನ್ನು ಒಳಗೊಂಡಿರುತ್ತದೆ

ಡಿಸೆಂಬರ್‌ 4

ಇಂದೋರ್

ಒಂದು ದಿನದ ಕಾರ್ಯಕ್ರಮ

ಮಹಾರಾಷ್ಟ್ರ

ಡಿಸೆಂಬರ್‌ 1

ಚಂದ್ರಾಪುರ

ಒಂದು ದಿನದ ಕಾರ್ಯಕ್ರಮ

ಒಡಿಶಾ

ಡಿಸೆಂಬರ್‌ 6-8

ಪುರಿ

ಧ್ಯಾನ ಶಿಬಿರ (ಒರಿಯಾ)

ಡಿಸೆಂಬರ್‌ 13-15

ಪುರಿ

ಧ್ಯಾನ ಶಿಬಿರ (ಇಂಗ್ಲಿಷ್)

ಪಂಜಾಬ್

ಸೆಪ್ಟೆಂಬರ್‌ 5

ಅಮೃತಸರ

ಒಂದು ದಿನದ ಕಾರ್ಯಕ್ರಮ

ರಾಜಸ್ಥಾನ

ಸೆಪ್ಟೆಂಬರ್‌ 27-29

ಜೈಪುರ

ಕ್ರಿಯಾ ಯೋಗ ದೀಕ್ಷೆಯನ್ನು ಒಳಗೊಂಡಿರುತ್ತದೆ

ತಮಿಳು ನಾಡು

ಜುಲೈ 26-28

ಸೇಲಂ

ಕ್ರಿಯಾ ಯೋಗ ದೀಕ್ಷೆಯನ್ನು ಒಳಗೊಂಡಿರುತ್ತದೆ

ಆಗಸ್ಟ್‌ 2-4

ತಿರುಚಿರಾಪಲ್ಲಿ

ಕ್ರಿಯಾ ಯೋಗ ದೀಕ್ಷೆಯನ್ನು ಒಳಗೊಂಡಿರುತ್ತದೆ

ಆಗಸ್ಟ್‌ 7

ತಿರುತುರೈಪೂಂಡಿ

ಒಂದು ದಿನದ ಕಾರ್ಯಕ್ರಮ

ತೆಲಂಗಾಣ

ಡಿಸೆಂಬರ್‌ 20-22

ಹೈದರಾಬಾದ್

ಕ್ರಿಯಾ ಯೋಗ ದೀಕ್ಷೆಯನ್ನು ಒಳಗೊಂಡಿರುತ್ತದೆ

ಉತ್ತರ ಪ್ರದೇಶ

ಸೆಪ್ಟೆಂಬರ್‌ 6-8

ಆಗ್ರಾ

ಕ್ರಿಯಾ ಯೋಗ ದೀಕ್ಷೆಯನ್ನು ಒಳಗೊಂಡಿರುತ್ತದೆ

ಪಶ್ಚಿಮ ಬಂಗಾಳ

ನವೆಂಬರ್‌ 22-24

ದಿಹಿಕಾ

ಧ್ಯಾನ ಶಿಬಿರ (ಬಂಗಾಳ)

ಮುಂಬರುವ ಕಾರ್ಯಕ್ರಮಗಳು

ಇದನ್ನು ಹಂಚಿಕೊಳ್ಳಿ