ಜೀವನ ಚರಿತ್ರೆಯ ಒಂದು ಸಂಕ್ಷಿಪ್ತ ಚಿತ್ರಣ
ರಾಜರ್ಷಿ ಜನಕಾನಂದ (ಜೇಮ್ಸ್ ಜೆ. ಲಿನ್)ರು ಪರಮಹಂಸ ಯೋಗಾನಂದರ ಪ್ರೀತಿ ಪಾತ್ರ ಶಿಷ್ಯರು ಮತ್ತು ಫೆಬ್ರವರಿ 20, 1955 ರಲ್ಲಿ ಅವರು ಕಾಲವಾಗುವವರೆಗೆ, ಗುರುಗಳ ಮೊದಲ ಉತ್ತರಾಧಿಕಾರಿಯಾಗಿ ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸೆಲ್ಫ್-ರಿಯಲೈಝೇಷನ್ ಫೆಲೋಶಿಪ್‌ನ ಅಧ್ಯಕ್ಷರು ಮತ್ತು ಆಧ್ಯಾತ್ಮಿಕ ಮುಖ್ಯಸ್ಥರಾಗಿದ್ದರು. ಶ್ರೀ ಲಿನ್‌ರವರು ಮೊದಲು ಪರಮಹಂಸಜಿ ಅವರಿಂದ 1932ರಲ್ಲಿ ಕ್ರಿಯಾಯೋಗ ದೀಕ್ಷೆಯನ್ನು ಪಡೆದರು; ಅವರ ಆಧ್ಯಾತ್ಮಿಕ ಪ್ರಗತಿ ಅದೆಷ್ಟು ತ್ವರಿತವಾಗಿತ್ತೆಂದರೆ, 1951 ರಲ್ಲಿ ರಾಜರ್ಷಿ ಜನಕಾನಂದ ಎಂಬ ಸನ್ಯಾಸಾಶ್ರಮದ ಹೆಸರನ್ನು ಪ್ರದಾನ ಮಾಡುವವರೆಗೆ, ಗುರುಗಳು ಪ್ರೀತಿಯಿಂದ ಅವರನ್ನು “ಸಂತ ಲಿನ್” ಎಂದು ಉಲ್ಲೇಖಿಸುತ್ತಿದ್ದರು.
ಅವರ ಸಂಕ್ಷಿಪ್ತ ಜೀವನ ಚರಿತ್ರೆಯ ಚಿತ್ರಣವನ್ನು ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸೆಲ್ಫ್-ರಿಯಲೈಝೇಷನ್ ಫೆಲೋಶಿಪ್‌ನಿಂದ ಪ್ರಕಟಿಸಲಾದ ರಾಜರ್ಷಿ ಜನಕಾನಂದ: ಎ ಗ್ರೇಟ್ ವೆಸ್ಟರ್ನ್ ಯೋಗಿ ಎಂಬ ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ. ಆ ಪುಸ್ತಕವು, ಹೆಚ್ಚು ವಿವರವಾದ ಜೀವನ ಚರಿತ್ರೆ ಮತ್ತು ಅವರ ಉಪನ್ಯಾಸಗಳಿಂದ ಆಯ್ದ ಭಾಗಗಳನ್ನು ಒಳಗೊಂಡಿದೆ. ಮತ್ತು ಅದರಲ್ಲಿ 60 ಪುಟಗಳಿಗೂ ಮೀರಿದ, ಪರಮಹಂಸಜಿಯವರು ಅವರೊಡನೆ ನಡೆಸಿದ ವೈಯಕ್ತಿಕ ಪತ್ರ ವ್ಯವಹಾರಗಳನ್ನೂ ಸೇರಿಸಲಾಗಿದೆ — ಗುರುವಿನ ಮಾರ್ಗದರ್ಶನದ ಮತ್ತು ಪ್ರೇಮದ ನುಡಿಗಳು ಅವರಿಬ್ಬರ ನಡುವೆ ಇದ್ದ ಆತ್ಮೀಯ ಆಧ್ಯಾತ್ಮಿಕ ಸಾಮರಸ್ಯದ ಮಿಂಚುನೋಟಗಳನ್ನು, ಗುರು-ಶಿಷ್ಯರ ಬಾಂಧವ್ಯದ ಆಳವನ್ನು ಶಕ್ತಿಯುತವಾಗಿ ತಿಳಿಸುತ್ತವೆ.
ರಾಜರ್ಷಿ ಅವರ ಸಂಕ್ಷಿಪ್ತ ಉಪನ್ಯಾಸಗಳ ಧ್ವನಿಮುದ್ರಣಗಳನ್ನು, ಎರಡು ಸಿಡಿ ಗಳಲ್ಲಿದ್ದು, ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸೆಲ್ಫ್-ರಿಯಲೈಝೇಶನ್ ಫಿಲೋಶಿಪ್ ನ, ಪರಮಹಂಸ ಯೋಗಾನಂದರ ಧ್ವನಿಮುದ್ರಿತ ಉಪನ್ಯಾಸಗಳ ಸಂಗ್ರಾಹಕರ ಅಪರೂಪದ ಸರಣಿಯಲ್ಲಿ ಸೇರಿಸಲಾಗಿದೆ: