ಪರಮಹಂಸ ಯೋಗಾನಂದರ ನಿತ್ಯ ಅಸ್ತಿತ್ವದಲ್ಲಿರುವ ಆಧ್ಯಾತ್ಮಿಕ ಮೇರುಕೃತಿಯ ಸಮಗ್ರ ಅವಲೋಕನ.

2021-22ನೆಯ ಇಸವಿ, ಜಗತ್ತಿನ ಅತ್ಯಂತ ಮೆಚ್ಚುಗೆ ಪಡೆದ ಆಧ್ಯಾತ್ಮಿಕ ಮೇರುಕೃತಿಗಳಲ್ಲಿ ಒಂದಾದ ಪರಮಹಂಸ ಯೋಗಾನಂದರ ಯೋಗಿಯ ಆತ್ಮಕಥೆ ಗೆ, 75ನೆಯ ವಾರ್ಷಿಕೋತ್ಸವ.

ಪರಮಹಂಸ ಯೋಗಾನಂದರ ಜೀವನ ಚರಿತ್ರೆಗೆ ಮೀಸಲಾದ ಪುಟಕ್ಕೆ ಸ್ವಾಗತ. ಈ ಪುಸ್ತಕವು ಜಗತ್ತಿನಾದ್ಯಂತ ಲಕ್ಷಾಂತರ ಜನರ ಹೃದಯ ಮತ್ತು ಮನಸ್ಸನ್ನು ತಟ್ಟಿದೆ. ಏಳು ದಶಕಗಳಿಗೂ ಮೀರಿ, ಈ ಪುಸ್ತಕವು ಅಸಂಖ್ಯಾತ ಓದುಗರನ್ನು ಭಾರತದ ಪ್ರಾಚೀನ ಯೋಗ ವಿಜ್ಞಾನಕ್ಕೆ ಮತ್ತು ಭಗವತ್‌ಸಾಕ್ಷಾತ್ಕಾರವನ್ನು ಹೊಂದಲು ಸಾಧ್ಯವಾಗಿಸುವ ವೈಜ್ಞಾನಿಕ ವಿಧಾನಗಳಿಗೆ ಪರಿಚಯಿಸಿದೆ, ಅವು ವಿಶ್ವ ನಾಗರಿಕತೆಗೆ ಭಾರತದ ಅನನ್ಯ ಮತ್ತು ಶಾಶ್ವತವಾದ ಕೊಡುಗೆಯಾಗಿವೆ.

1946 ರಲ್ಲಿ ಮೊದಲ ಬಾರಿಗೆ ಮುದ್ರಣವಾದಾಗಿನಿಂದ ಒಂದು ಮೇರುಕೃತಿ ಎಂದು ಪ್ರಶಂಸಿಸಲ್ಪಟ್ಟಂತಹ ಆತ್ಮಚರಿತ್ರೆ, ನಿರಂತರವಾಗಿ ಆಧ್ಯಾತ್ಮಿಕ ಜನಪ್ರಿಯ ಗ್ರಂಥಗಳ ಪಟ್ಟಿಗಳಲ್ಲಿದೆ ಮತ್ತು ವಿವಿಧ ಮಾರ್ಗಗಳ ಆಧ್ಯಾತ್ಮಿಕ ಆಕಾಂಕ್ಷಿಗಳಿಂದ ಓದಲ್ಪಟ್ಟಿದೆ. ಈ ಪುಸ್ತಕವನ್ನು 1999 ರಲ್ಲಿ “ಶತಮಾನದ 100 ಅತ್ಯುತ್ತಮ ಆಧ್ಯಾತ್ಮಿಕ ಪುಸ್ತಕ” ಗಳಲ್ಲಿ ಒಂದು ಎಂದು ಗೌರವಿಸಲಾಯಿತು.

ಮುಂದುವರಿದ ಮತ್ತು ವಿಸ್ತರಿಸುತ್ತಿರುವ ಆಸಕ್ತಿಯಿಂದಾಗಿ, ಪುಸ್ತಕವನ್ನು 15 ಪ್ರಮುಖ ಭಾರತೀಯ ಉಪಖಂಡದ ಭಾಷೆಗಳಿಗೆ ಮತ್ತು ಪ್ರಪಂಚದಾದ್ಯಂತ ಐವತ್ತಕ್ಕೂ ಹೆಚ್ಚು ಭಾಷೆಗಳಿಗೆ ಅನುವಾದಿಸಲಾಗಿದೆ ಮತ್ತು ಪ್ರಕಟಿಸಲಾಗಿದೆ.

ಹಾರ್ಡ್‌ಬೌಂಡ್, ಪೇಪರ್‌ಬ್ಯಾಕ್, ಆಡಿಯೋ ಮತ್ತು ಇ-ಬುಕ್ ಫಾರ್ಮಾಟ್‌ಗಳಲ್ಲಿ ಲಭ್ಯವಿದೆ.

ಆಡಿಯೋ ಬುಕ್‌ಗಳನ್ನು ಉಚಿತವಾಗಿ ಡೌನ್‌ಲೋಡ್‌ ಮಾಡಿಕೊಳ್ಳಿ

ನಿಮ್ಮ ಮೊಬೈಲ್ ಫೋನ್‌ನಲ್ಲಿ ಈ ಐದು ಭಾರತೀಯ ಭಾಷೆಗಳಲ್ಲಿ ಯೋಗಿಯ ಆತ್ಮಕಥೆಯ ಆಡಿಯೋ ಆವೃತ್ತಿಯನ್ನು ಡೌನ್‌ಲೋಡ್ ಮಾಡಿಕೊಂಡು ಆಲಿಸಿ.

ಇ-ಬುಕ್ ಡೌನ್‌ಲೋಡ್‌ ಮಾಡಿ

ಈ ಇ-ಬುಕ್ ಉದ್ಯಮ-ಗುಣಮಟ್ಟದ (industry-standard) ಇಪಬ್ ಫಾರ್ಮ್ಯಾಟ್‌ನಲ್ಲಿದೆ ಮತ್ತು ಸೂಕ್ತವಾದ ಇ-ರೀಡಿಂಗ್ ಅಪ್ಲಿಕೇಶನ್‌ನೊಂದಿಗೆ ಬಹುತೇಕ ಸಾಧನಗಳಲ್ಲಿ (Devices) ಓದಬಹುದು.

ಇಂಗ್ಲಿಷ್‌ ಆಡಿಯೋ ಬುಕ್‌ ಸಿಡಿಯನ್ನು ಖರೀದಿಸಿ

ವಾಚಕರು: “ಗಾಂಧಿ” ಚಲನಚಿತ್ರಕ್ಕಾಗಿ ಅಕಾಡೆಮಿ ಪ್ರಶಸ್ತಿ ಪಡೆದ ಸರ್ ಬೆನ್ ಕಿಂಗ್ಸ್ಲಿ

ಪುಸ್ತಕದ ನಸುನೋಟ

ಅತ್ಯಂತ ಸ್ಫೂರ್ತಿದಾಯಕ ಉಧೃತ ಭಾಗ

ಒಬ್ಬ ಅನನ್ಯ ಲೇಖಕ, ಒಂದು ಅನನ್ಯ ಪುಸ್ತಕ ಹಾಗೂ ಒಂದು ಅನನ್ಯ ಸಂದೇಶ

ಆಪ್ತ ಶಿಷ್ಯಂದಿರ ವೃತ್ತಾಂತಗಳು

53 ಭಾಷೆಗಳಿಗೆ ಅನುವಾದಗೊಂಡಿದೆ

ಯೋಗಿಯ ಆತ್ಮಕಥೆಯ ರಚನೆ

ಈ ಕೃತಿಯ ಬರವಣಿಗೆಯ ಬಗ್ಗೆ ಬಹಳ ಹಿಂದೆಯೇ ಭವಿಷ್ಯ ನುಡಿಯಲಾಗಿತ್ತು. ಆಧುನಿಕ ಕಾಲದಲ್ಲಿ ಯೋಗದ ಪುನರುಜ್ಜೀವನದ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರಾದ, ಹತ್ತೊಂಬತ್ತನೇ ಶತಮಾನದ ಪೂಜ್ಯ ಗುರುಗಳಾದ ಶ್ರೀ ಶ್ರೀ ಲಾಹಿರಿ ಮಹಾಶಯರು ಭವಿಷ್ಯ ನುಡಿದಿದ್ದರು: “ನಾನು ಹೊರಟುಹೋದ ಸುಮಾರು ಐವತ್ತು ವರ್ಷಗಳ ಮೇಲೆ, ಯೋಗದ ಬಗ್ಗೆ ಪಾಶ್ಚಾತ್ಯ ದೇಶಗಳಲ್ಲಿ, ತೀವ್ರವಾದ ಆಸಕ್ತಿಯುಂಟಾಗುವುದರಿಂದ, ನನ್ನ ಜೀವನದ ಪ್ರಸಂಗಗಳನ್ನು ಬರೆಯಲಾಗುತ್ತದೆ. ಯೋಗದ ಸಂದೇಶವು ಭೂಮಂಡಲವನ್ನೆಲ್ಲ ಆವರಿಸುತ್ತದೆ. ಮನುಷ್ಯರ ಭ್ರಾತೃತ್ವವನ್ನು ಸ್ಥಾಪಿಸುವುದಕ್ಕೆ, ಅದರಿಂದ ಸಹಾಯವಾಗುತ್ತದೆ: ಮಾನವರೆಲ್ಲ ಒಬ್ಬನೇ ತಂದೆಯ ಮಕ್ಕಳು ಎಂಬ ನೇರ ಅರಿವಿನಿಂದ ಮೂಡುವ ಒಗ್ಗಟ್ಟು ಅದು.”

ಅನೇಕ ವರ್ಷಗಳ ನಂತರ, ಲಾಹಿರಿ ಮಹಾಶಯರ ಘನತೆವೆತ್ತ ಶಿಷ್ಯರಾದ ಸ್ವಾಮಿ ಶ್ರೀ ಶ್ರೀ ಯುಕ್ತೇಶ್ವರರು ಈ ಭವಿಷ್ಯವಾಣಿಯನ್ನು ಶ್ರೀ ಶ್ರೀ ಯೋಗಾನಂದರಿಗೆ ತಿಳಿಸಿದರು.

ಒಂದು ಆಳವಾದ ಭರವಸೆ

ಪುಸ್ತಕದ ಕೊನೆಯ ಅಧ್ಯಾಯದಲ್ಲಿ, ಪರಮಹಂಸ ಯೋಗಾನಂದರು ಬರೆಯುತ್ತಾರೆ:

“ಪರಮಾತ್ಮ ಪ್ರೇಮಮಯೀ; ಆತನ ಸೃಷ್ಟಿಯ ಯೋಜನೆ ಪ್ರೇಮಮೂಲವಾದುದೇ ಆಗಿರಬೇಕು. ಪಾಂಡಿತ್ಯದ ವಿವೇಚನೆಗಿಂತ ಆ ಬಗೆಯ ಸರಳಭಾವನೆ ಮಾನವ ಹೃದಯಕ್ಕೆ ನೆಮ್ಮದಿಯನ್ನು ತರಲಾರದೇನು? ಸತ್ಯದ ಹೃದಯವನ್ನು ಭೇದಿಸಿದ ಪ್ರತಿಯೊಬ್ಬ ಸಂತನೂ ವಿಶ್ವಾದ್ಯಂತ ದೈವೀಯೋಜನೆ ಕೆಲಸ ಮಾಡುತ್ತಿದೆಯೆಂದೂ ಹಾಗೂ ಅದು ಅತ್ಯಂತ ಸುಂದರವೂ ಆನಂದಮಯವೂ ಆದುದೆಂದೂ ಪ್ರಮಾಣಪೂರ್ವಕವಾಗಿ ಕಂಡಿದ್ದಾನೆ.”

ನಿಮ್ಮ ಆತ್ಮವು ಭಾರತದ ಋಷಿಗಳ ಅತೀಂದ್ರಿಯ ಸತ್ಯದಲ್ಲಿ ಆಳವಾದ ನಂಬಿಕೆಗೆ ತೆರೆದುಕೊಳ್ಳುವುದನ್ನು ನೀವು ಕಾಣುವಿರಿ ಎಂಬುದು ನಮ್ಮ ಆಶಯವಾಗಿದೆ. ಮತ್ತು ಆ ನಂಬಿಕೆಯು ನಿಮ್ಮನ್ನು ಕಷ್ಟಗಳಲ್ಲಿ ಹಾಗೂ ನಿಜವಾದ ಸಂತೋಷ ಮತ್ತು ತೃಪ್ತಿಯ ಅನ್ವೇಷಣೆಯಲ್ಲಿ ಆಸರೆಯಾಗಿರುತ್ತದೆ.

ಇದನ್ನು ಹಂಚಿಕೊಳ್ಳಿ