Paramahansa Yoganandaಪರಮಹಂಸ ಯೋಗಾನಂದರನ್ನು (1893 — 1952) ಈಗಿನ ಕಾಲದ ಸರ್ವೋತ್ಕೃಷ್ಟ ಆಧ್ಯಾತ್ಮಿಕ ಮಹಾಪುರುಷರಲ್ಲೊಬ್ಬರೆಂದು ಪರಿಗಣಿಸಲಾಗಿದೆ.

ಜನಪ್ರಿಯ ಆಧ್ಯಾತ್ಮಿಕ ಮೇರುಕೃತಿಯಾದ ಯೋಗಿಯ ಆತ್ಮಕಥೆಯ ಲೇಖಕರಾದ, ಈ ಒಲುಮೆಯ ವಿಶ್ವ ಗುರುಗಳು, ಲಕ್ಷಾಂತರ ಓದುಗರನ್ನು ಪೂರ್ವದ ಚಿರಸ್ಥಾಯಿ ಜ್ಞಾನಕ್ಕೆ ಪರಿಚಯಿಸಿದ್ದಾರೆ. ಈಗ ಇವರನ್ನು ವ್ಯಾಪಕವಾಗಿ ಪಶ್ಚಿಮದ ಯೋಗ ಪಿತಾಮಹ ಎಂದು ಪರಿಗಣಿಸಲಾಗಿದೆ. ಇವರು 1917ರಲ್ಲಿ ಯೋಗದಾ ಸತ್ಸಂಗ ಸೊಸೈಟಿ ಆಫ್‌ ಇಂಡಿಯಾವನ್ನು ಮತ್ತು 1920ರಲ್ಲಿ ಸೆಲ್ಫ್‌-ರಿಯಲೈಝೇಷನ್‌ ಫೆಲೋಷಿಪ್‌ ಅನ್ನು ಸ್ಥಾಪಿಸಿದರು. ಇವು ಇಂದು ಶ್ರೀ ಶ್ರೀ ಮೃಣಾಲಿನಿ ಮಾತಾರವರ ಉತ್ತರಾಧಿಕಾರಿಯಾದ ಐದನೆಯ ಅಧ್ಯಕ್ಷರಾದ ಶ್ರೀ ಶ್ರೀ ಸ್ವಾಮಿ ಚಿದಾನಂದ ಗಿರಿಯವರ ನೇತೃತ್ವದಲ್ಲಿ ಗುರುಗಳ ಆಧ್ಯಾತ್ಮಿಕ ಪರಂಪರೆಯನ್ನು ಪ್ರಪಂಚದಾದ್ಯಂತ ಮುಂದುವರೆಸಿಕೊಂಡು ಹೋಗುತ್ತಿವೆ.

ಪರಮಹಂಸ ಯೋಗಾನಂದರು ಈ ಕೆಳಗಿನ ವಿಷಯಗಳ ಬಗ್ಗೆಯ ತಮ್ಮ ವಿಸ್ತೃತ ಬೋಧನೆಗಳಿಂದ ಲಕ್ಷಾಂತರ ಜನರ ಜೀವನದಲ್ಲಿ ಗಾಢವಾದ ಪ್ರಭಾವವನ್ನು ಬೀರಿದ್ದಾರೆ:

ಅವರು ಬೋಧಿಸಿದ ತತ್ವಬೋಧನೆಗಳು ಹಾಗೂ ಧ್ಯಾನದ ತಂತ್ರಗಳು ಇಂದು ಈ ಮಾಧ್ಯಮಗಳ ಮೂಲಕ ಲಭ್ಯವಿವೆ:

  • ಯೋಗದಾ ಸತ್ಸಂಗದ ಪಾಠಗಳು, ಸ್ವತಃ ಯೋಗಾನಂದಜೀ ಅವರೇ ಶುರು ಮಾಡಿದ ಗೃಹಾಧ್ಯಯನದ ಒಂದು ಸಮಗ್ರ ಸರಣಿ;
  • ಭಾರತ ಹಾಗೂ ನೆರೆಹೊರೆಯ ದೇಶಗಳಲ್ಲಿ ಅವರ ಬೋಧನೆಗಳನ್ನು ಪ್ರಸಾರ ಮಾಡಲು ಅವರು ಸ್ಥಾಪಿಸಿದ ಸಂಸ್ಥೆಯಾದ ವೈಎಸ್ಎಸ್‌ನಿಂದ ಪ್ರಕಟಣೆಗೊಂಡ ಪುಸ್ತಕಗಳು, ಧ್ವನಿಮುದ್ರಿಕೆಗಳು ಹಾಗೂ ಇತರ ಪ್ರಕಟಣೆಗಳು;
  • ದೇಶದ ಎಲ್ಲೆಡೆ ಇರುವ ವೈಎಸ್ಎಸ್‌ ಆಶ್ರಮಗಳು ಹಾಗೂ ಧ್ಯಾನ ಕೇಂದ್ರಗಳಲ್ಲಿ ಯೋಗದಾ ಸತ್ಸಂಗ ಸೊಸೈಟಿ ಆಫ್‌ ಇಂಡಿಯಾದ ಸನ್ಯಾಸಿಗಳು ನಡೆಸಿಕೊಡುವ ಕಾರ್ಯಕ್ರಮಗಳು.

ಇದನ್ನು ಹಂಚಿಕೊಳ್ಳಿ