ಯೋಗಿಯ ಆತ್ಮಕಥೆ ಎಂಪಿ3 ಆವೃತ್ತಿ

ಸಂಕ್ಷೇಪಿಸಿಲ್ಲದ ಎಂಪಿ3 ಆವೃತ್ತಿ

ಆಧ್ಯಾತ್ಮಿಕ ನಿಧಿ ಎಂದು ಜಗದಾದ್ಯಂತ ಪ್ರಶಂಸಿಲ್ಪಡುತ್ತಿರುವ, ಅತ್ಯತ್ತಮ-ಮಾರಾಟವಾಗುವ ಈ ಜನಪ್ರಿಯ ಗ್ರಂಥವು, ಲಕ್ಷಾಂತರ ಜನರನ್ನು, ಹೊಸ ಹಾಗೂ ಬದುಕನ್ನು ಗಾಢವಾಗಿ ಸಂತುಷ್ಟಗೊಳಿಸುವ ಮಾರ್ಗದತ್ತ ಬದಲಾಯಿಸುತ್ತಿದೆ. ಪರಮಹಂಸ ಯೋಗಾನಂದರ ಅಸಾಧಾರಣ ಜೀವನ ಚರಿತ್ರೆಯು, ಅವರ ಎಲ್ಲ ಜ್ಞಾನ, ಹಾಸ್ಯ ಪ್ರಜ್ಞೆ ಹಾಗೂ ಸ್ಫೂರ್ತಿಯನ್ನು ನುಡಿದಾಡುವ ಭಾಷೆಯಲ್ಲಿ ಅದ್ಭುತವಾಗಿ ಬಿಚ್ಚಿಟ್ಟಿದೆ.

ಈ ಪುಸ್ತಕವನ್ನು ಹೊಸದಾಗಿ ಓದುತ್ತಿರುವವರು, ಹಾಗೂ ಯಾರು ಇದನ್ನು ಒಂದು ದೀರ್ಘಕಾಲದಿಂದ ಕಾಪಾಡಿಕೊಂಡು ಬಂದ ನಿಧಿಯಂತೆ ಭಾವಿಸುತ್ತಾರೋ, ಅವರೆಲ್ಲರೂ ಈ ಭಾವಪೂರ್ಣ ಹಾಗೂ ಕೇಳುವುದಕ್ಕೆ ಒತ್ತಾಯಿಸುವ ವೃತ್ತಿಪರ ನಿರೂಪಕನ ಓದನ್ನು ಸ್ವಾಗತಿಸುತ್ತಾರೆ. ಅವರ ನವಿರಾದ ನಾಟಕೀಯತೆಯು, ಶ್ರೀ ಯೋಗಾನಂದರ ಅನೇಕ ವರ್ಣರಂಜಿತ ಕಥಾನಕಗಳನ್ನು ಕಣ್ಣ ಮುಂದೆ ತಂದು ನಿಲ್ಲಿಸುತ್ತದೆ. ಲೇಖಕರು ಅನೇಕ ಜನರನ್ನು ಭೇಟಿ ಮಾಡಿದ ಚಿತ್ರಸದೃಶ ಸಂದರ್ಭಗಳು, ಅನುಭವಗಳು ಹಾಗೂ ಘಟನೆಗಳು ಮತ್ತು ಬದುಕಿನ ಮೂಲಭೂತ ರಹಸ್ಯಗಳ ಅವರ ಜಾಜ್ವಲ್ಯಮಾನವಾದ ಅನ್ವೇಷಣೆಗಳನ್ನು ಪಠಣಕಾರರು ಕಣ್ಣ ಮುಂದೆ ಜೀವಂತವಾಗಿ ತಂದು ನಿಲ್ಲಿಸುತ್ತಾರೆ.

ವಿವಿಧ ಪ್ರಕಾರಗಳಲ್ಲಿ ಕೂಡ ಸಿಗುತ್ತದೆ:

ಇದನ್ನು ಹಂಚಿಕೊಳ್ಳಿ