ಭಗವಾನ್ ಕೃಷ್ಣನನ್ನು ಅವತಾರ ಪುರುಷ (ಭಗವಂತನ ಅವತಾರ) ಎಂದು ಭಾರತಾದ್ಯಂತ ಗೌರವಿಸುತ್ತಾರೆ. ಭಗವಾನ್ ಕೃಷ್ಣನ ಉತ್ಕೃಷ್ಟ ಬೋಧನೆಗಳು ಭಗವದ್ಗೀತೆಯಲ್ಲಿ ಪ್ರತಿಷ್ಠಾಪಿಸಲ್ಪಟ್ಟಿವೆ.
ಪರಮಹಂಸ ಯೋಗಾನಂದರು ಬರೆದಿರುವ ಅತ್ಯಂತ ಮೆಚ್ಚುಗೆ ಪಡೆದ ಗೀತೆಯ ಮೇಲಿನ ಎರಡು-ಸಂಪುಟಗಳ ವ್ಯಾಖ್ಯಾನದಲ್ಲಿ ಹೀಗೆ ಬರೆದಿರುತ್ತಾರೆ:
“ಭಗವದ್ಗೀತೆಯು ಭಾರತದಲ್ಲಿ ಅತ್ಯಂತ ಪ್ರೀತಿಪಾತ್ರ ಶಾಸ್ತ್ರವಾಗಿದೆ, ಶಾಸ್ತ್ರಗಳ ಒಂದು ಶಾಸ್ತ್ರವಾಗಿದೆ. ಅದು ಹಿಂದುಗಳ ಪವಿತ್ರ ಒಡಂಬಡಿಕೆ ಅಥವಾ ಬೈಬಲ್ – ಈ ಒಂದು ಪುಸ್ತಕವನ್ನು ಎಲ್ಲಾ ಗುರುಗಳು, ಆಧ್ಯಾತ್ಮಿಕ ಪ್ರಮಾಣದ ಅತ್ಯುನ್ನತ ಆಕರವನ್ನಾಗಿ ಅದನ್ನು ಅವಲಂಬಿಸುತ್ತಾರೆ. . . .
“ಗೀತೆಯು ಅದೆಷ್ಟು ಸಮಗ್ರ ಆಧ್ಯಾತ್ಮಿಕ ಮಾರ್ಗದರ್ಶಿಯಾಗಿದೆ, ಎಂದರೆ ಅದನ್ನು ವಿಚಾರ ಪೂರ್ಣ 4 ವೇದಗಳು, 108 ಉಪನಿಷತ್ತುಗಳು, 6 ಹಿಂದು ತತ್ವಶಾಸ್ತ್ರ ದರ್ಶನಗಳ ಸಾರವೆಂದು ಘೋಷಿಸಲಾಗಿದೆ. . . . ವಿಶ್ವಾತ್ಮದ ಸಂಪೂರ್ಣ ಜ್ಞಾನವು ಗೀತೆಯಲ್ಲಿ ಅಡಕವಾಗಿದೆ. ಅತ್ಯುನ್ನತ ಉತ್ಕೃಷ್ಟವಾದ, ಆದರೂ ಪ್ರಶಾಂತಿದಾಯಕ ಸೌಂದರ್ಯ ಮತ್ತು ಸರಳತೆಯಿಂದ ಕೂಡಿದ ಅರಿವು ನೀಡುವ ಭಾಷೆಯಲ್ಲಿ, ಗೀತೆಯನ್ನು, ಅರ್ಥೈಸುತ್ತಾರೆ ಮತ್ತು ಮಾನವೀಯ ಶ್ರೀಸಂಗ್ರಾಮ ಮತ್ತು ಆಧ್ಯಾತ್ಮಿಕ ಪರಿಶ್ರಮಗಳ ಎಲ್ಲಾ ಸ್ತರಗಳಲ್ಲಿಯೂ ಅದನ್ನು ಅನುಕರಿಸಲಾಗುತ್ತಿದೆ
— ವಿಶಾಲ ಹರವಿನ ಮಾನವನ ಉತ್ಕಟ ಸ್ವಭಾವಗಳು ಮತ್ತು ಅವಶ್ಯಕತೆಗಳಿಗೆ ಆಶ್ರಯ ನೀಡುತ್ತಲಿದೆ. ಒಬ್ಬ ವ್ಯಕ್ತಿಯು ಭಗವಂತನೆಡೆಗೆ ಹಿಂತಿರುಗುವ ತನ್ನ ಮಾರ್ಗದಲ್ಲಿ ಎಲ್ಲಿರುವನೋ, ಅಲ್ಲಿ ಗೀತೆಯು ಅವನ ಆ ಪಯಣದ ಹಾದಿಯ ಮೇಲೆ ತನ್ನ ಬೆಳಕನ್ನು ಬೀರುತ್ತದೆ. . . .
“ಕೃಷ್ಣನು ಪೂರ್ವ ದೇಶದಲ್ಲಿ ಯೋಗದ ದೈವೀ ಮಾದರಿಯಾಗಿದ್ದಾನೆ; ಕ್ರಿಸ್ತನು ಭಗವಂತನು ಆರಿಸಿದ ಭಗವತ್ ಐಕ್ಯತೆಗೆ, ಪಾಶ್ಚಿಮಾತ್ಯದಲ್ಲಿ ಮಾದರಿಯಾಗಿದ್ದಾನೆ. . . . ಕೃಷ್ಣನು ಅರ್ಜುನನಿಗೆ ಕಲಿಸಿದ ಮತ್ತು IV:29 ಮತ್ತು V:27–28 ಗೀತೆಯ ಅಧ್ಯಾಯಗಳಲ್ಲಿ ಉಲ್ಲೇಖಿಸಿರುವ ಕ್ರಿಯಾಯೋಗ ತಂತ್ರವು, ಯೋಗ ಧ್ಯಾನದ ಅತಿ ಶ್ರೇಷ್ಠ ಆಧ್ಯಾತ್ಮಿಕ ವಿಜ್ಞಾನವಾಗಿದೆ. ಭೌತಿಕ ಕಾಲಗಳಲ್ಲಿ ರಹಸ್ಯವಾಗಿ ಇಡಲ್ಪಟ್ಟ ಈ ಅವಿನಾಶಿ ಯೋಗವು ಆಧುನಿಕ ಮಾನವ ಜನಾಂಗಕ್ಕೆ ಮಹಾವತಾರ ಬಾಬಾಜಿಯವರಿಂದ ಪುನರುಜ್ಜೀವನಗೊಳಿಸಲ್ಪಟ್ಟು, ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸೆಲ್ಫ್-ರಿಯಲೈಝೇಶನ್ ಫೆಲೋಶಿಪ್‌ನ ಗುರುಗಳಿಂದ ಕಲಿಸಲಾಗುತ್ತಿದೆ.”