ನಿಮ್ಮ ಪ್ರದೇಶದಲ್ಲಿ ಧ್ಯಾನ ಕಾರ್ಯಕ್ರಮಗಳು

ಧ್ಯಾನ ಕಾರ್ಯಕ್ರಮಗಳು

ರಾಂಚಿ ಆಶ್ರಮದಲ್ಲಿ ಆಡಳಿತ ಕಟ್ಟಡ.

ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ, ದೇಶದಾದ್ಯಂತ 180 ಕ್ಕೂ ಹೆಚ್ಚು ಧ್ಯಾನಧಾಮಗಳುಆಶ್ರಮಗಳು ಮತ್ತು ಧ್ಯಾನ ಕೇಂದ್ರಗಳನ್ನು ಹೊಂದಿದೆ — ಇದು ಎಲ್ಲಾ ಆಸಕ್ತ ಅನ್ವೇಷಕರಿಗೆ ಸಮೂಹ ಧ್ಯಾನಗಳ ಶಕ್ತಿಯನ್ನು ಅನುಭವಿಸಲು ಒಟ್ಟಿಗೆ ಸೇರುವ ಅವಕಾಶವನ್ನು ಒದಗಿಸುತ್ತದೆ. ಸಾಪ್ತಾಹಿಕ ಸ್ಫೂರ್ತಿದಾಯಕ ಸತ್ಸಂಗಗಳಲ್ಲಿ ಶ್ರೀ ಶ್ರೀ ಪರಮಹಂಸ ಯೋಗಾನಂದರ ಬರಹಗಳ ವಾಚನಗಳು, ಹಾಗೆಯೇ ಭಕ್ತಿ ಗಾಯನ, ಮೌನ ಧ್ಯಾನ ಮತ್ತು ಪ್ರಾರ್ಥನೆಯ ಅವಧಿಗಳು ಸೇರಿರುತ್ತವೆ.

ಪರಮಹಂಸ ಯೋಗಾನಂದರು ಕಲಿಸಿದ ಧ್ಯಾನದ ತಂತ್ರಗಳಲ್ಲಿ ಶಿಕ್ಷಣವನ್ನು ಪಡೆಯಲು, ಯೋಗದಾ ಸತ್ಸಂಗ ಪಾಠಗಳಿಗೆ ನೋಂದಾಯಿಸಿ.

ಉಪನ್ಯಾಸ ಪ್ರವಾಸಗಳು

Devotees listening to Satsanga.

ಪರಮಹಂಸ ಯೋಗಾನಂದಜಿಯವರ ಬೋಧನೆಗಳು ಮತ್ತು ಧ್ಯಾನ ತಂತ್ರಗಳು, ಸಾಮೂಹಿಕ ಧ್ಯಾನಗಳು, ಸಾರ್ವಜನಿಕ ಉಪನ್ಯಾಸಗಳು ಮತ್ತು ಪ್ರಾದೇಶಿಕ ಧ್ಯಾನಶಿಬಿರಗಳನ್ನು ನಡೆಸಿಕೊಡಲು ಪ್ರತಿ ವರ್ಷವೂ ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾದ ಸಂನ್ಯಾಸಿಗಳು ದೇಶದಾದ್ಯಂತ ನಗರಗಳಿಗೆ ಭೇಟಿ ನೀಡುತ್ತಾರೆ:

ಈ ಸಂನ್ಯಾಸಿಗಳ ಭೇಟಿಗಳು ಹೊಸಬರಿಗೆ, ಪರಮಹಂಸ ಯೋಗಾನಂದರ ಬೋಧನೆಗಳ ಪರಿಚಯವನ್ನು ನೀಡುತ್ತವೆ ಮತ್ತು ಪಾಠಗಳ ವಿದ್ಯಾರ್ಥಿಗಳಿಗೆ ವೈಎಸ್‌ಎಸ್‌ ಧ್ಯಾನ ತಂತ್ರಗಳಲ್ಲಿ ಆಳವಾದ ಮಾರ್ಗದರ್ಶನವನ್ನು ನೀಡುತ್ತವೆ.

ಧ್ಯಾನ ಶಿಬಿರಗಳು, ಧ್ಯಾನ ತಂತ್ರಗಳ ತರಗತಿಗಳನ್ನು ಒಳಗೊಂಡಿರುತ್ತವೆ ಮತ್ತು ಸಾಮೂಹಿಕ ಧ್ಯಾನ ಮತ್ತು ಅನೌಪಚಾರಿಕ ಉಪನ್ಯಾಸಗಳಿಗೆ ಅವಕಾಶಗಳನ್ನು ಒದಗಿಸುತ್ತವೆ.

ಸ್ಥಳಗಳು ಮತ್ತು ದಿನಾಂಕಗಳ ಸಂಪೂರ್ಣ ಪಟ್ಟಿಗಾಗಿ ದಯವಿಟ್ಟು ಪ್ರವಾಸದ ವೇಳಾಪಟ್ಟಿಯನ್ನು ನೋಡಿ.

ನಿಮ್ಮ ಸಮುದಾಯದಲ್ಲಿ ಲಭ್ಯವಿರುವ ಕಾರ್ಯಕ್ರಮಗಳ ಬಗ್ಗೆ ಅರಿತುಕೊಳ್ಳಿ.

ನಿಮ್ಮ ಸ್ಥಳೀಯ ಕೇಂದ್ರ, ಆಶ್ರಮ ಅಥವಾ ಧ್ಯಾನ ತಂಡವನ್ನು ಸಂಪರ್ಕಿಸಿ.

ಪರಮಹಂಸ ಯೋಗಾನಂದರು ಕಲಿಸಿರುವ ಧ್ಯಾನ ತಂತ್ರಗಳನ್ನು ನಿಮ್ಮದೇ ಮನೆಯ ಏಕಾಂತತೆಯಲ್ಲಿ ಅಧ್ಯಯನ ಮಾಡಲು ನೀವು ಬಯಸಿದರೆ, ನಮ್ಮ ಗೃಹ-ಅಧ್ಯಯನ ಪಾಠಗಳ ಬಗ್ಗೆ ಅರಿಯಿರಿ.

ಇದನ್ನು ಹಂಚಿಕೊಳ್ಳಿ