ನಿಜವಾಗಿಯೂ, ಯೋಗ ಎಂದರೇನು?

A women with swan

ನಮ್ಮಲ್ಲಿ ಹೆಚ್ಚಿನವರು ಇಚ್ಛೆಯ ಈಡೇರಿಕೆಗಾಗಿ ತಮ್ಮ ಹೊರಗಿನದನ್ನು ನೋಡುವ ವಾಡಿಕೆ ಇಟ್ಟುಕೊಂಡಿರುತ್ತಾರೆ. ನಾವು ಬಯಸಿದ್ದನ್ನು ಹೊರಗಿನ ಸಾಧನಗಳು ಪೂರೈಸ ಬಲ್ಲವು ಎಂಬ ನಂಬಿಕೆಯ ಪರಿಸ್ಥಿತಿಯುಳ್ಳ ಪ್ರಪಂಚದಲ್ಲಿ ನಾವು ಬದುಕುತ್ತಿದ್ದೇವೆ. ಆದರೂ ಮತ್ತೆ ಮತ್ತೆ ನಮ್ಮ ಅನುಭವಗಳು “ಮತ್ತಷ್ಟು ಹೆಚ್ಚಿಗೆ” ಎನ್ನುವ ಆಳವಾದ ಆಂತರ್ಯದ ಬೇಡಿಕೆಯನ್ನು ಸಂಪೂರ್ಣವಾಗಿ ಪೂರೈಸಲು ಹೊರಗಿನ ಯಾವುದಕ್ಕೂ ಸಾಧ್ಯವಿಲ್ಲ ಎನ್ನುವುದನ್ನು ನಮಗೆ ತೋರಿಸುತ್ತವೆ.

ಆದಾಗ್ಯೂ, ಹೆಚ್ಚು ಸಮಯಗಳಲ್ಲಿ, ನಾವು ಯಾವಾಗಲೂ ನಮಗೆ ಎಟುಕದೆ ಇರುವುದನ್ನು ಸುಳ್ಳಾಗಿಸಲು, ಅದರ ಕಡೆ ಶ್ರಮಿಸುವುದನ್ನು ನಾವು ಕಾಣುತ್ತೇವೆ. ನಾವು ಇರುವಿಗಿಂತ ಹೆಚ್ಚಾಗಿ ಮಾಡುವುದರಲ್ಲಿ, ಅರಿವಿಗಿಂತ ಹೆಚ್ಚಾಗಿ ಕಾರ್ಯನಿರತರಾಗಿರುವಲ್ಲಿ ಸಿಕ್ಕಿಕೊಂಡಿರುತ್ತೇವೆ. ಎಲ್ಲಿ ಆಲೋಚನೆಗಳು ಮತ್ತು ಭಾವನೆಗಳು ನಿರಂತರ ಚಲನೆಯಲ್ಲಿ ಕುಣಿಯುವುದನ್ನು ನಿಲ್ಲಿಸುವುವೋ, ಅಂತಹ ಒಂದು ಪರಿಪೂರ್ಣ ಶಾಂತಿ ಮತ್ತು ವಿರಾಮದ ಸ್ಥಿತಿಯನ್ನು ಕಲ್ಪಿಸಿಕೊಳ್ಳಲು ನಮಗೆ ಬಹಳ ಕಷ್ಟವಾಗುತ್ತದೆ. ಆದರೂ ಅಂತಹ ಪ್ರಶಾಂತತೆಯ ಸ್ಥಿತಿಯ ಮೂಲಕವೇ, ನಾವು ಆನಂದದ ಮತ್ತು ವಿವೇಕದ ಒಂದು ಸ್ತರವನ್ನು ಮುಟ್ಟಬಹುದು, ಇಲ್ಲವಾದರೆ ಅದು ಅಸಂಭವವಾಗುತ್ತದೆ.

ಬೈಬಲ್ ನಲ್ಲಿ ಹೇಳಲಾಗಿದೆ “ಸ್ಥಿರವಾಗಿರು ಮತ್ತು ನಾನೇ ದೇವರು ಎಂಬುದನ್ನು ತಿಳಿ.” ಈ ಕೆಲವು ಪದಗಳಲ್ಲಿ ಯೋಗ ವಿಜ್ಞಾನಕ್ಕೆ ಕೀಲಿಕೈ ಇದೆ. ಈ ಸನಾತನ ಆಧ್ಯಾತ್ಮ ವಿಜ್ಞಾನವು, ‘ನಾವು ನಿಜವಾಗಿಯೂ ಯಾರು’ ಎಂಬ ಅರಿಯುವಿಕೆಯನ್ನು ತಡೆಯುವ, ಆಲೋಚನೆಗಳ ಸಹಜ ಚಂಚಲತೆ ಮತ್ತು ದೇಹದ ಪ್ರಕ್ಷುಬ್ಧತೆಯನ್ನು ನಿಶ್ಚಲಗೊಳಿಸಬಲ್ಲ, ನೇರವಾದ ಜ್ಞಾನವನ್ನು ನೀಡಿರುತ್ತದೆ.

ಸಾಮಾನ್ಯವಾಗಿ ನಮ್ಮ ಅರಿವು ಮತ್ತು ಶಕ್ತಿಗಳು ಹೊರಮುಖವಾಗಿ, ನಮ್ಮ ಸೀಮಿತ ಸಾಧನಗಳಾದ ಪಂಚೇಂದ್ರಿಯಗಳ ಮೂಲಕ ಗ್ರಹಿಸುವ, ಈ ಪ್ರಪಂಚದ ವಸ್ತುಗಳ ಕಡೆಗೆ ನಿರ್ದೇಶಿತವಾಗಿರುತ್ತವೆ. ಏಕೆಂದರೆ, ಮಾನವನ ತರ್ಕವು, ಭೌತಿಕ ಇಂದ್ರಿಯಗಳು ಸರಬರಾಜು ಮಾಡಿದ, ಭಾಗಶಃ ಹಾಗೂ ಹೆಚ್ಚಾಗಿ, ಮೋಸಗೊಳಿಸುವ ಮಾಹಿತಿಗಳ ಮೇಲೆ ಅವಲಂಬಿತವಾಗಿರಬೇಕಾಗಿರುತ್ತದೆ. ನಾವು ಜೀವನದ -ನಾನು ಯಾರು? ನಾನು ಇಲ್ಲಿ ಏಕೆ ಇರುವೆ? ಸತ್ಯದ ಸಾಕ್ಷಾತ್ಕಾರವನ್ನು ಹೇಗೆ ಮಾಡಿಕೊಳ್ಳಲಿ? ಎಂಬ ನಿಗೂಢ ಪ್ರಶ್ನೆಗಳನ್ನು ಪರಿಹರಿಸಬೇಕಾದಲ್ಲಿ, ನಾವು ಅರಿವಿನ ಆಳವಾದ ಹಾಗೂ ಅತಿ ಸೂಕ್ಷ್ಮತರ ಸ್ತರಗಳನ್ನು ಮೆಲ್ಲನೆ ತಟ್ಟುವುದನ್ನು ಕಲಿಯಬೇಕಾಗುತ್ತದೆ.

‌ ಶಕ್ತಿ ಮತ್ತು ಪ್ರಜ್ಞೆಗಳ ಸಾಮಾನ್ಯ ಹೊರಹರಿವುಗಳನ್ನು ಹಿಮ್ಮುಖವಾಗಿ ನಡೆಸಲು ಯೋಗವು ಒಂದು ಸರಳ ಪ್ರಕ್ರಿಯೆ. ಅದರಿಂದಾಗಿ ಮನಸ್ಸು ನೇರ ಗ್ರಹಿಕೆಯ ಕ್ರಿಯಾತ್ಮಕ ಕೇಂದ್ರವಾಗುತ್ತದೆ ಮತ್ತು ಮುಂದೆಂದೂ ದೋಷಪೀಡಿತ ಇಂದ್ರಿಯಗಳ ಮೇಲೆ ಅವಲಂಬಿತವಾಗದೆ, ಸತ್ಯವನ್ನು ಸಹಜವಾಗಿಯೇ ಅನುಭವಿಸಲು ಸಮರ್ಥವಾಗುತ್ತದೆ.

Krishna Meditating

ಯಾವುದನ್ನೂ ಭಾವೋದ್ವೇಗಗಳಿಗೊಳಪಡದೆ ಅಥವಾ ಅಂಧವಿಶ್ವಾಸದಿಂದ ಒಪ್ಪದೆ, ಯೋಗ ವಿಧಾನಗಳನ್ನು ಹಂತ ಹಂತವಾಗಿ ಅಭ್ಯಾಸ ಮಾಡುವುದರಿಂದ, ನಾವು ಎಲ್ಲರಿಗೂ ಪ್ರಾಣ ನೀಡುವ ಮತ್ತು ಯಾವುದು ನಮ್ಮದೇ ನೈಜ ಆತ್ಮದ ಪರಮಸತ್ವನಾದ ಆ ಅನಂತ ಪ್ರಜ್ಞಾನ, ಶಕ್ತಿ ಮತ್ತು ಪರಮಾನಂದಗಳೊಡನೆ ಒಂದಾಗುವುದನ್ನು ಅರಿತುಕೊಳ್ಳುತ್ತೇವೆ.

ಹಿಂದಿನ ಶತಮಾನಗಳಲ್ಲಿ, ವಿಶ್ವವನ್ನು ಆಳುವ ಶಕ್ತಿಗಳ ಬಗ್ಗೆ ಮಾನವರು ಹೊಂದಿದ್ದ ಸೀಮಿತ ಜ್ಞಾನದ ಪರಿಮಿತಿಯಿಂದಾಗಿ, ಯೋಗದ ಅನೇಕ ಉನ್ನತ ತಂತ್ರಗಳನ್ನು ಅತ್ಯಲ್ಪವಾಗಿ ಅರ್ಥ ಮಾಡಿಕೊಳ್ಳುತ್ತಿದ್ದರು ಅಥವಾ ಅಭ್ಯಾಸ ಮಾಡುತ್ತಿದ್ದರು. ಆದರೆ ಇಂದು ವೈಜ್ಞಾನಿಕ ಪರಿಶೋಧನೆಯು, ನಾವು ನಮ್ಮನ್ನೇ ಹಾಗೂ ವಿಶ್ವವನ್ನೇ ವೀಕ್ಷಿಸುವ ವಿಧಾನವನ್ನು ತ್ವರಿತವಾಗಿ ಬದಲಾಯಿಸುತ್ತಿದೆ. ಜೀವನದ ಸಾಂಪ್ರದಾಯಿಕ ಭೌತಿಕ ಕಲ್ಪನೆಯು,’ ವಸ್ತು ಮತ್ತು ಶಕ್ತಿ ,ಎರಡೂ ಮೂಲಭೂತವಾಗಿ ಒಂದೇ: ಅಸ್ತಿತ್ವದಲ್ಲಿರುವ ಪ್ರತಿಯೊಂದು ವಸ್ತುವನ್ನೂ ಒಂದು ನಮೂನೆ ಅಥವಾ ಶಕ್ತಿಯ ರೂಪವಾಗಿ ಕುಗ್ಗಿಸಬಹುದು, ಅದು ಪರಸ್ಪರ ಸಂವಹನಗೊಳ್ಳಬಹುದು ಮತ್ತು ಇತರ ರೂಪಗಳೊಡನೆ ಸಂಪರ್ಕಗೊಳ್ಳಬಹುದು.’ ಎಂಬ ಅನ್ವೇಷಣೆಯಿಂದ ಇಂದು ಮಾಯವಾಗಿದೆ. ಇಂದಿನ ಅತ್ಯಂತ ಹೆಸರಾಂತ ಭೌತಶಾಸ್ತ್ರಜ್ಞರಲ್ಲಿ ಕೆಲವರು, ಮತ್ತೊಂದು ಹೆಜ್ಜೆ ಮುಂದಿಟ್ಟು, ಪ್ರಜ್ಞೆಯು ಎಲ್ಲಾ ಅಸ್ತಿತ್ವಗಳ ಮೂಲಭೂತ ಆಧಾರ ಎಂದು ಗುರುತಿಸಿರುವರು. ಹೀಗೆ ಆಧುನಿಕ ವಿಜ್ಞಾನವು ಯೋಗದ ಪ್ರಾಚೀನ ತತ್ವಗಳನ್ನು ಪುಷ್ಟೀಕರಿಸುತ್ತ, ಐಕ್ಯತೆಯು ವಿಶ್ವದಲ್ಲಿ ವ್ಯಾಪಿಸುತ್ತಿದೆ ಎಂಬುದನ್ನು ದೃಢಪಡಿಸುತ್ತಿದೆ.

ಯೋಗ ಎನ್ನುವ ಪದದ ಅರ್ಥವೇ ‘ಐಕ್ಯತೆ’: ವ್ಯಕ್ತಿಯ ಪ್ರಜ್ಞೆ ಅಥವಾ ಆತ್ಮವು ವಿಶ್ವ ಪ್ರಜ್ಞೆಯಲ್ಲಿ ಅಥವಾ ಚೇತನದಲ್ಲಿ ಶ್ರುತಿ ಗೊಳ್ಳುವುದು. ಅನೇಕ ಜನರು ಯೋಗವನ್ನು ಕೇವಲ ದೈಹಿಕ ವ್ಯಾಯಾಮಗಳು ಎಂದು ತಿಳಿದಿದ್ದಾರೆ -ಆಸನಗಳು ಅಥವಾ ಭಂಗಿಗಳು ಇತ್ತೀಚಿನ ದಶಕಗಳಲ್ಲಿ ವ್ಯಾಪಕವಾದ ಜನಮನ್ನಣೆಯನ್ನು ಪಡೆದಿವೆ- ಆದರೂ ಇವುಗಳು ನಿಜವಾಗಿಯೂ ಮಾನವನ ಮನಸ್ಸು ಹಾಗೂ ಆತ್ಮಗಳ ಅನಂತ ಸಾಮರ್ಥ್ಯಗಳನ್ನು ಬಯಲು ಮಾಡುವ ಈ ಅಗಾಧ ವಿಜ್ಞಾನದ ಕೇವಲ ಅತ್ಯಂತ ಮೇಲ್ನೋಟದ ಹೊದಿಕೆಯಾಗಿವೆ.

Japa Mala for Mantra yog

ಈ ಗುರಿಯ ಕಡೆಗೆ ಮುನ್ನಡೆಸುವ, ಯೋಗದ ಅನೇಕ ಮಾರ್ಗಗಳಿವೆ. ಪ್ರತಿಯೊಂದೂ ಒಂದು ಸಮಗ್ರ ವ್ಯವಸ್ಥೆಯ ಒಂದು ವಿಶೇಷ ಶಾಖೆಯಾಗಿದೆ:

ಹಠಯೋಗ — ಇದೊಂದು ಭೌತಿಕ ಭಂಗಿಗಳ ಅಥವಾ ಆಸನಗಳ ವ್ಯವಸ್ಥೆ. ಇದರ ಉನ್ನತ ಉದ್ದೇಶವು ದೇಹವನ್ನು ಶುದ್ಧೀಕರಿಸುವುದು, ಆ ವ್ಯಕ್ತಿಗೆ ತನ್ನ ದೇಹದ ಆಂತರ್ಯದ ಸ್ಥಿತಿಗಳ ಮೇಲಿನ ಅರಿವು ಮತ್ತು ನಿಯಂತ್ರಣವನ್ನು ತರಿಸಿ, ಅದನ್ನು ಧ್ಯಾನಕ್ಕೆ ಯೋಗ್ಯವನ್ನಾಗಿ ನಿರೂಪಿಸುವುದು.

ಕರ್ಮ ಯೋಗ —  ಇತರರನ್ನು ತನ್ನದೇ ವಿಶಾಲವಾದ ಅಹಂನ ಭಾಗವೆಂದು ಪರಿಗಣಿಸಿ, ಫಲಾಪೇಕ್ಷೆ ಇಲ್ಲದೆ ನಿಸ್ವಾರ್ಥ ಸೇವೆಯನ್ನು ನೀಡುವುದು ಮತ್ತು ಎಲ್ಲಾ ಕರ್ಮಗಳನ್ನು ‘ಭಗವಂತನೇ ಕರ್ತೃ’ ಎಂಬ ಪ್ರಜ್ಞೆಯೊಂದಿಗೆ ಮಾಡುವುದು.

ಮಂತ್ರಯೋಗ —  ಪ್ರಜ್ಞೆಯನ್ನು ಜಪದ ಮೂಲಕ, ಅಂತರಂಗದಲ್ಲಿ ಕೇಂದ್ರೀಕರಿಸುವುದು ಅಥವಾ ಚೇತನದ ನಿರ್ದಿಷ್ಟ ಅಂಶಗಳನ್ನು ಪ್ರತಿನಿಧಿಸುವ ವಿಶಿಷ್ಟ ಸಾರ್ವತ್ರಿಕ ಮೂಲ-ಪದದ ಶಬ್ದಗಳನ್ನು ಪುನರಾವರ್ತಿಸುವುದು.

ಭಕ್ತಿ ಯೋಗ — ಸರ್ವ ಸಮರ್ಪಣಾ ಭಾವದ ಭಕ್ತಿಯ ಮೂಲಕ, ಪ್ರತಿಯೊಂದು ಜೀವಿಯಲ್ಲಿಯೂ ಮತ್ತು ಪ್ರತಿಯೊಂದರಲ್ಲೂ, ದೈವತ್ವವನ್ನು ಮತ್ತು ಪ್ರೇಮವನ್ನು ಕಾಣಲು ಪ್ರಯತ್ನಿಸುವುದು; ಅದರಂತೆ, ಆರಾಧನೆಯನ್ನು ನಿರಂತರವಾಗಿ ನಿರ್ವಹಿಸುವುದು.

ಜ್ಞಾನ ಯೋಗ — ವಿವೇಕದ ಮಾರ್ಗ, ಅದರಲ್ಲಿ ಆಧ್ಯಾತ್ಮದ ಮುಕ್ತಿಯನ್ನು ಸಾಧಿಸಲು, ವಿವೇಚನಾಯುಕ್ತ ಬುದ್ಧಿವಂತಿಕೆಯ ಅನ್ವಯಿಸುವಿಕೆಗೆ ಒತ್ತು ಕೊಡುವುದು.

ರಾಜಯೋಗ — ಯೋಗದ ಅತ್ಯುನ್ನತ ಮಾರ್ಗ ಅಥವಾ ರಾಜ ಮಾರ್ಗ. ಭಗವದ್ಗೀತೆಯಲ್ಲಿ ಭಗವಾನ್ ಕೃಷ್ಣನಿಂದಾಗಿ ಅಮರವಾಯಿತು. ಮತ್ತು ಕ್ರಿಸ್ತಪೂರ್ವ ಎರಡನೇ ಶತಮಾನದಲ್ಲಿ ಭಾರತದ ಮಹರ್ಷಿ ಪತಂಜಲಿ ಯಿಂದ ವಿದ್ಯುಕ್ತವಾಗಿ ವ್ಯವಸ್ಥಿತಗೊಳಿಸಲಾಯಿತು. ಅದು ಇನ್ನಿತರ ಎಲ್ಲಾ ಮಾರ್ಗಗಳ ಸಾರವನ್ನು ಸಂಯೋಜಿಸಿರುತ್ತದೆ.

Bhagavad Gita Commentary by Paramahansa Yogananda

ರಾಜಯೋಗ ಪದ್ಧತಿಯ ಪ್ರಧಾನ ಭಾಗದಲ್ಲಿ, ಈ ವಿವಿಧ ವಿಧಾನಗಳನ್ನು ಸಮತೋಲನಗೊಳಿಸಿ ಮತ್ತು ಒಟ್ಟುಗೂಡಿಸಿದ್ದು, ಅದರ ಧ್ಯಾನದ ನಿಶ್ಚಿತ, ವೈಜ್ಞಾನಿಕ ಮಾರ್ಗಗಳನ್ನು ಅಭ್ಯಾಸ ಮಾಡಿದಾಗ, ಆ ವ್ಯಕ್ತಿಯ ಪ್ರಯತ್ನಗಳ ಆರಂಭದಿಂದಲೇ, ಅಂತಿಮ ಗುರಿಯಾದ ಅಕ್ಷಯವಾದ ಆನಂದಮಯ ಚೇತನದೊಂದಿಗೆ, ಪ್ರಜ್ಞೆಯ ತಾದಾತ್ಮ್ಯತೆಯ ಸುಳಿವುಗಳನ್ನು ಗ್ರಹಿಸಲು ಶಕ್ತಗೊಳಿಸುತ್ತದೆ.

ಯೋಗದ ಗುರಿಯನ್ನು ತಲುಪಲು ಅತೀ ಶೀಘ್ರವಾದ ಮತ್ತು ಅತ್ಯಂತ ಪರಿಣಾಮಕಾರಿ ವಿಧಾನಗಳನ್ನು ನಿಯಮಿಸುವ ಸಲುವಾಗಿ, ಧ್ಯಾನದ ಆ ಮಾರ್ಗಗಳು ನೇರವಾಗಿ ಶಕ್ತಿ ಮತ್ತು ಪ್ರಜ್ಞೆಗಳ ಜೊತೆಯಲ್ಲಿ ವ್ಯವಹರಿಸುತ್ತವೆ. ಈ ನೇರವಾದ ಅನುಸಂಧಾನವೇ ಕ್ರಿಯಾಯೋಗದ ಗುಣಲಕ್ಷಣವಾಗಿದ್ದು, ಅದೇ ಪರಮಹಂಸ ಯೋಗಾನಂದರು ಕಲಿಸುವ, ರಾಜಯೋಗ ಮಾರ್ಗದ ಧ್ಯಾನದ ನಿರ್ದಿಷ್ಟ ಮಾರ್ಗವಾಗಿದೆ.

ಇದನ್ನು ಹಂಚಿಕೊಳ್ಳಿ