ಅಭಿಪ್ರಾಯಗಳು ಮತ್ತು ವಿಮರ್ಶೆಗಳು

ಮನಸೂರೆಗೊಳ್ಳುವಂತಿದೆ, ಮನೋರಂಜನೀಯವಾಗಿದೆ ಹಾಗೂ ಅರಿವುಂಟುಮಾಡುತ್ತದೆ

"ಯೋಗಿಯ ಆತ್ಮಕಥೆಯು ಇದುವರೆಗೆ ಬರೆಯಲ್ಪಟ್ಟಿರುವ ಬಹು ಮನೋರಂಜನೀಯವೂ ಮತ್ತು ಅರಿವನ್ನು ಮೂಡಿಸುವ ಆಧ್ಯಾತ್ಮಿಕ ಪುಸ್ತಕಗಳಲ್ಲಿ ಒಂದೆಂದು ಯುಕ್ತವಾಗಿಯೇ ಶ್ಲಾಘಿಸಲ್ಪಡುತ್ತಿದೆ."

— ಟಾಮ್‌ ಬಟ್ಲರ್‌-ಬೋಡೆನ್‌, ಲೇಖಕರು,
50 ಸ್ಪಿರಿಚುವಲ್‌ ಕ್ಲಾಸಿಕ್ಸ್‌ : ಟೈಮ್‌ಲೆಸ್‌ ವಿಸ್‌ಡಂ ಫ್ರಮ್‌ 50 ಗ್ರೇಟ್‌ ಬುಕ್ಸ್‌ ಆಫ್‌ ಇನ್ನರ್‌ ಡಿಸ್ಕವರಿ, ಎನ್‌ಲೈಟನ್‌ಮೆಂಟ್‌ & ಪರ್‌ಪಸ್‌

"ನಮ್ಮ ಸಮಕಾಲೀನ ಓದುಗರು ಯೋಗಿಯ ಆತ್ಮಕಥೆಯಂತಹ ಒಂದು ಸುಂದರ, ಆಳವಾದ ಮತ್ತು ಸತ್ಯತೆಯುಳ್ಳ ಪುಸ್ತಕವನ್ನು ಕಾಣುವುದು ವಿರಳ…… ಜ್ಞಾನದ ಭಂಡಾರವಾಗಿದೆ ಮತ್ತು ವೈಯಕ್ತಿಕ ಅನುಭವಗಳ ಶ್ರೀಮಂತಿಕೆಯುಳ್ಳದ್ದಾಗಿದೆ...."

— ಲಾ ಪಾಝ್‌, ಬೊಲಿವಿಯಾ

"ಓದಬಹುದಾದ ಶೈಲಿಯಲ್ಲಿ…ಯೋಗಾನಂದರು ಯೋಗದ ಒಪ್ಪಿಗೆಯಾಗುವಂತಹ ಸಂಗತಿಯನ್ನು ಮುಂದಿಟ್ಟಿದ್ದಾರೆ ಹಾಗೂ ಯಾರು 'ಹೀಯಾಳಿಸುವುದಕ್ಕೆ ಬಂದರೋ' ಅವರು ʼಪ್ರಾರ್ಥನೆ ಮಾಡುವುದಕ್ಕಾಗಿʼ ಉಳಿಯುವವರಾದರು."

— ಸ್ಯಾನ್‌ ಫ್ರಾನ್ಸಿಸ್ಕೋ ಕ್ರಾನಿಕಲ್‌

"ಅಮೂಲಾಗ್ರ ದಿವ್ಯಜ್ಞಾನ…ಮಾನವ ಜನಾಂಗವು ತನ್ನನ್ನು ತಾನು ಇನ್ನೂ ಹೆಚ್ಚಾಗಿ ಅರಿಯಲು ಸಹಾಯ ಮಾಡಬಲ್ಲಂಥದ್ದು…ಆತ್ಮಕಥೆಗಳಲ್ಲಿಯೇ ಅತ್ಯಂತ ಅತ್ಯುತ್ತಮವಾದುದಾಗಿದೆ…ಕುತೂಹಲವಿಷ್ಟವಾಗಿದೆ…ಸಂತಸ ತರುವ ಹಾಸ್ಯಪ್ರಜ್ಞೆ ಹಾಗೂ ಮನನಾಟುವ ಪ್ರಾಮಾಣಿಕತೆಯಿಂದ ಹೇಳಲ್ಪಟ್ಟಿದೆ…ಯಾವುದಾದರೂ ಕಾದಂಬರಿಯಷ್ಟೇ ಮನೋಹರವಾಗಿದೆ."

— ನ್ಯೂಸ್-ಸೆಂಟಿನೆಲ್, ಫೋರ್ಟ್‌ ವೇನ್‌, ಇಂಡಿಯಾನಾ

"ಪ್ರತಿವರ್ಷವೂ ಪ್ರಕಾಶಗೊಳ್ಳುವ ಸಾವಿರಾರು ಪುಸ್ತಕಗಳಲ್ಲಿ, ಮನರಂಜನೆಗೊಳಿಸುವವು ಕೆಲವು, ಬೋಧಿಸುವವು ಕೆಲವು, ಜ್ಞಾನಪ್ರದಾಯಕಗಳು ಕೆಲವು. ಈ ಮೂರನ್ನೂ ನೀಡುವಂತಹುದೊಂದನ್ನು ಓದುಗನು ಕಂಡರೆ ಅವನು ತನ್ನನ್ನು ಭಾಗ್ಯಶಾಲಿಯೆಂದು ಪರಿಗಣಿಸಬಹುದು. ಯೋಗಿಯ ಆತ್ಮಕಥೆಯು ಅದಕ್ಕಿಂತಲೂ ಅಪರೂಪವಾದುದು. ಅದು ಮನಸ್ಸನ್ನು ಮತ್ತು ಚೈತನ್ಯದ ಕಿಟಕಿಗಳನ್ನು ತೆರೆಯುವಂತಹ ಒಂದು ಗ್ರಂಥ."

— ಇಂಡಿಯಾ ಜರ್ನಲ್

ಆಧ್ಯಾತ್ಮಿಕ ಪಥದಲ್ಲಿ ಅತೀ ಹೆಚ್ಚು- ಮಾರಾಟವಾಗುವ ಮಾರ್ಗದರ್ಶಿ

"ದಶಕಗಳ ನಂತರ ದಶಕಗಳು ಕಳೆದರೂ, ಯೋಗಿಯ ಆತ್ಮಕಥೆ ನಮ್ಮಲ್ಲಿ ಅತೀ ಹೆಚ್ಚು- ಮಾರಾಟವಾಗುವ ಪುಸ್ತಕಗಳಲ್ಲಿ ಒಂದು. ಅನೇಕ ಪುಸ್ತಕಗಳು ಬಂದು ಹೋಗುತ್ತವೆಯಾದರೂ, ಇದು ಉಳಿಯುತ್ತದೆ ಏಕೆಂದರೆ, ಕಾಲಕಾಲಕ್ಕೂ ವಿವೇಚನೆಯ ಶೋಧನೆಯು ಅದು ಆಧ್ಯಾತ್ಮಿಕ ಪೂರ್ಣಸಿದ್ಧಿಗೆ ಹೃದಯಸ್ಪರ್ಶಿಯಾದ ಮತ್ತು ಮಹೋನ್ನತವಾದ ಮಾರ್ಗವನ್ನು ತೆರೆದಿಡುತ್ತದೆ ಎಂಬುದನ್ನು ತೋರಿಸಿಕೊಟ್ಟಿದೆ."

— ಬೋಧಿ ಟ್ರೀ ಬುಕ್‌ಸ್ಠೋರ್‌, ಲಾಸ್‌ ಏಂಜಲೀಸ್‌

"ಆಧ್ಯಾತ್ಮಿಕ ಹಾದಿಯಲ್ಲಿರುವ ಯಾರೇ ಆದರೂ ಈ ಪ್ರಬುದ್ಧ ಸಾಹಿತ್ಯಿಕ ಕೃತಿಯಿಂದ ಪ್ರಭಾವಿತವಾಗಿಲ್ಲದಿರುವುದನ್ನು ಕಾಣುವುದು ಕಷ್ಟಸಾಧ್ಯ. ಇದು ಯೋಗ, ಧ್ಯಾನ ಮತ್ತು ಆತ್ಮ ಶೋಧನೆಯ ಹಾದಿಗೆ ನನ್ನನ್ನು ಕರೆದೊಯ್ಯಿತು, ಅದು ಇಂದಿನವರೆಗೂ ಮುಂದುವರೆದಿದೆ."

— ಜ್ಯಾಕ್ ಕ್ಯಾನ್‌ಫೀಲ್ಡ್, ಸೋಲ್® ಸೀರಿಸ್‌ಗಾಗಿ ಚಿಕನ್ ಸೂಪ್‌ನ ಸಹ-ನಿರ್ಮಾತೃ

"ಓದುಗರನ್ನು ಮಂತ್ರಮುಗ್ಧವಾಗಿಸುವ ಪುಟಗಳು, ಏಕೆಂದರೆ ಅವು ಪ್ರತಿಯೊಬ್ಬ ಮನುಷ್ಯನ ಹೃದಯದಲ್ಲಿ ಸುಪ್ತವಾಗಿರುವ ಆಕಾಂಕ್ಷೆ ಮತ್ತು ಹಾತೊರೆಯುವಿಕೆಯ ಗಮನ ಸೆಳೆಯುತ್ತವೆ."

— ಇಲ್ ಟೆಂಪೊ ಡೆಲ್ ಲುನೆಡಿ, ರೋಮ್

"1946 ರಲ್ಲಿ ಮೊದಲು ಪ್ರಕಟವಾಗಿ ನಂತರ ಲೇಖಕರಿಂದ ವಿಸ್ತೃತಗೊಂಡ, ಇದು ಆಧ್ಯಾತ್ಮಿಕ ಜೀವನದ ಸಾರವನ್ನು ತಿಳಿಹೇಳುವ ಕಾರಣ, ಇದು ಪ್ರಪಂಚದ ಆಧ್ಯಾತ್ಮಿಕ ಸಾಹಿತ್ಯದಲ್ಲಿ ಅತ್ಯಂತ ಪ್ರಮುಖ ಪಠ್ಯಗಳಲ್ಲಿ ಒಂದಾಗಿದೆ."

— ದಿ ಸಾಂಟಾ ಫೆ ಸನ್

"ಅತ್ಯಂತ ರಂಜನೀಯವಾದ, ಸರಳವಾದ ಮತ್ತು ಕೇವಲ ಆತ್ಮಜ್ಞಾನವನ್ನು ಪ್ರಕಾಶಗೊಳಿಸುವ ಬಾಳಿನ ಕಥನಗಳಲ್ಲೊಂದು…ನಿಜಕ್ಕೂ ಕಲಿಕೆಯ ಸಂಪತ್ಭಂಡಾರ…ಈ ಪುಟಗಳಲ್ಲಿ ಒಬ್ಬರು ಸಂಧಿಸುವ ಖ್ಯಾತ ಪುರುಷರು…ವಿಫುಲ ಆಧ್ಯಾತ್ಮಿಕ ಜ್ಞಾನ ಸಂಪನ್ನರಾದ ಸ್ನೇಹಿತರಂತೆ ಸ್ಮೃತಿಯಲ್ಲಿ ಉಳಿಯುತ್ತಾರೆ. ಸ್ವತಃ ಗ್ರಂಥಕಾರರು ಇಂತಹ ಅತ್ಯಂತ ಮಹೋನ್ನತವಾದಂತಹವರಲ್ಲಿ ದೇವೋನ್ಮತ್ತರಾದವರಾದಂಥ ಒಬ್ಬರು."

— ಡಾ॥ ಅನ್ನಾವಾನ್ ಹೆಲ್ಮ್ ಹೋಲ್ಟ್ಸ್‌ -ಫೆಲಾನ್, ಇಂಗ್ಲಿಷ್‌ ಪ್ರಾಧ್ಯಾಪಕರು, ಯೂನಿವರ್ಸಿಟಿ ಆಫ್ ಮಿನ್ನೆಸೋಟಾ

ಭಾರತದ ಆಧ್ಯಾತ್ಮಿಕ ಸಮೃದ್ಧಿಯ ಒಂದು ಸೂಕ್ಷ್ಮದೃಷ್ಟಿಯ ಅವಲೋಕನ

"ಯೋಗಿಯ ಆತ್ಮಕಥೆಯು ಅಧುನಿಕ ಯುಗದ ಉಪನಿಷದ್‌ ಎಂದು ಪರಿಗಣಿಸಲ್ಪಡುತ್ತಿದೆ….ಇದು ವಿಶ್ವಾದ್ಯಂತ ಇರುವ ನೂರಾರು ಸಾವಿರಾರು ಸತ್ಯಾನ್ವೇಷಿಗಳ ಆಧ್ಯಾತ್ಮಿಕ ತೃಷೆಯನ್ನು ತೃಪ್ತಿಪಡಿಸಿದೆ. ಭಾರತದಲ್ಲಿರುವ ನಾವು ಭಾರತದ ಸಂತರು ಮತ್ತು ತತ್ವಗಳ ಬಗೆಗಿರುವ ಈ ಪುಸ್ತಕದ ಅಸಾಧಾರಣ ಜನಪ್ರಿಯತೆಯನ್ನು ಆಶ್ಚರ್ಯದಿಂದ ಮುಗ್ಧರಾಗಿ ಗಮನಿಸಿದ್ದೇವೆ. ಭಾರತದ ಸನಾತನ ಧರ್ಮದ, ಅಮೃತ ಮಧುವಾದ ಸತ್ಯದ ಚಿರಂತನ ನಿಯಮಗಳನ್ನು, ಯೋಗಿಯ ಆತ್ಮಕಥೆ ಯ ಬಂಗಾರದ ಬಟ್ಟಲಲ್ಲಿ ಸಂಗ್ರಹಿಸಿಡಲಾಗಿದೆ ಎಂದು ನಮಗೆ ಅಪಾರ ತೃಪ್ತಿ ಮತ್ತು ಹೆಮ್ಮೆಯಿದೆ."

— ಡಾ. ಅಶುತೋಷ್‌ ದಾಸ್‌, ಎಂ, ಎ., ಪಿ, ಎಚ್‌.ಡಿ., ಡಿ.ಲಿಟ್‌., ಪ್ರಾಧ್ಯಾಪಕರು, ಕಲ್ಕತ್ತಾ ವಿಶ್ವವಿದ್ಯಾಲಯ

"ಅಧುನಿಕ ಕಾಲದ ಹಿಂದೂ ಮಹಾತ್ಮರ ಅಸಾಧಾರಣ ಜೀವನ ಹಾಗೂ ಶಕ್ತಿಗಳನ್ನು ಪ್ರತ್ಯಕ್ಷವಾಗಿ ಕಂಡು ಹೇಳುವಂತಹ ಈ ಪುಸ್ತಕ ಯಥಾಕಾಲದ ಹಾಗೂ ಕಾಲಾತೀತವಾದ ಪ್ರಾಮುಖ್ಯವನ್ನು ಪಡೆದಿದೆ.... ಪಶ್ಚಿಮದಲ್ಲಿ ಹಿಂದೆಂದೂ ಪ್ರಕಟವಾಗದ ಭಾರತದ ಆಧ್ಯಾತ್ಮಿಕ ಸಂಪತ್ತಿನ…ನಿಸ್ಸಂಶಯವಾಗಿ, ಅವರ ಅಸಾಮಾನ್ಯ ಜೀವನ ದಾಖಲೆಯನ್ನು ಬಹಳ ಗಂಭೀರವಾಗಿ ತಿಳಿಯಪಡಿಸುವ ಕಥನಗಳಲ್ಲಿ ಒಂದು."

— ಡಾ. ಡಬ್ಲ್ಯು. ವೈ. ಇವಾನ್ಸ್-ವೆಂಟ್ಸ್‌, ಎಂ.ಎ., ಡಿ.ಲಿಟ್.‌,ಡಿ.ಎಸ್‌ಸಿ., ಸುಪ್ರಸಿದ್ಧ ವಿದ್ವಾಂಸರು ಮತ್ತು ಪೌರ್ವಾತ್ಯ ಧರ್ಮದ ಮೇಲಿನ ಅನೇಕ ಕೃತಿಗಳ ಗ್ರಂಥಕರ್ತರು

"ಯೋಗಾನಂದರು ಮಾತನಾಡುವ ವಿಚಾರವು ಸಾವಿಲ್ಲದ ಸಂತರುಗಳದ್ದಾಗಿರಲಿ ಮತ್ತು ಅಲೌಕಿಕ ರೋಗೋಪಶಮನಗಳದ್ದಾಗಿರಲಿ ಅಥವಾ ಅವರು ಭಾರತದ ಜ್ಞಾನ ಮತ್ತು ಯೋಗ ವಿಜ್ಞಾನವನ್ನು ತಿಳಿಸಿಕೊಡುವುದೇ ಆಗಿರಲಿ, ಓದುಗನು ಮಾತ್ರ ಅದರಿಂದ ಮೋಹ ಪರವಶನಾಗುತ್ತಾನೆ."

— ಡೈ ವೆಲ್ಟ್ವೊಕೆ, ಜ್ಯೂರಿಕ್, ಸ್ವಿಟ್ಸರ್ಲೆಂಡ್

ಸಕಲ ಧರ್ಮಗಳ ಆಧ್ಯಾತ್ಮಿಕ ತಿರುಳು

"ಕೊನೆಗೂ, ವಿರೋಧಾತ್ಮಕವಲ್ಲದ ಹಾಗೂ ಅಂತರ್ಭೊದಿತವಾಗಿ ಸಂತುಷ್ಟಿಗೊಳಿಸುವ ಒಂದು ಚಿತ್ರಣ, ಅಂತರಿಕ್ಷದಲ್ಲಿ ಸುತ್ತುತ್ತಿರುವ ವಿಶ್ವಗಳಿಂದ ಮಾನವ ಜೀವನದ ಸೂಕ್ಷ್ಮ ವಿಷಯಗಳ ತನಕ."

— ರನ್ನರ್ಸ್‌ ವರ್ಲ್ಡ್

"[ಯೋಗಾನಂದರ] ಸುಪ್ರಸಿದ್ಧ ಯೋಗಿಯ ಆತ್ಮಕಥೆಯಲ್ಲಿ ಯೋಗದ ಸಾಧನೆಯಿಂದ ಉತ್ತಮ ಸ್ತರಗಳನ್ನು ಮುಟ್ಟಿದ ವಿಶ್ವ ಪ್ರಜ್ಞೆಯ ಪ್ರಖರವಾದ ಮಾಹಿತಿಯನ್ನು ಮತ್ತು ಯೋಗದ ಮತ್ತು ವೇದಾಂತದ ದೃಷ್ಟಿಗಳಿಂದ ಮಾನವನ ಸಹಜ ಸ್ವಭಾವವನ್ನು ಕುರಿತ ಅನೇಕ ಆಕರ್ಷಣೀಯ ಯಥಾರ್ಥ ಚಿತ್ರಗಳನ್ನು ಅವರು ನೀಡಿರುತ್ತಾರೆ."

— ರಾಬರ್ಟ್ ಎಸ್.ಎಲ್‌ವುಡ್, ಪಿ.ಎಚ್.ಡಿ., ಅಧ್ಯಕ್ಷರು, ಸ್ಕೂಲ್ ಆಫ್ ರಿಲಿಜನ್, ಯೂನಿವರ್ಸಿಟಿ ಆಫ್ ಸದರ್ನ್ ಕ್ಯಾಲಿಫೋರ್ನಿಯ

"ಆತ್ಮಕಥೆಯ ಸಂಪೂರ್ಣ ಯಥಾರ್ಥತೆಗೆ ಸಾದೃಶ್ಯ ಉಳ್ಳಂಥವು ವಿರಳ, ನಿಮ್ಮ ಧಾರ್ಮಿಕ ನಂಬಿಕೆಗಳ ಹೊರತಾಗಿಯೂ ನಿಮ್ಮನ್ನು ಭೇದಿಸಿಕೊಂಡು ಹೋಗುವುದು ಖಂಡಿತ."

— ಬ್ರ್ಯಾಂಚಸ್

ಮಾಧ್ಯಮದ ಸಮೀಕ್ಷೆಗಳು

ಪರಮಹಂಸ ಯೋಗಾನಂದರ ಯೋಗಿಯ ಆತ್ಮಕಥೆಯ 75ನೇ ವಾರ್ಷಿಕೋತ್ಸದ ಸ್ಮರಣಾರ್ಥದ ಭಾಗವಾಗಿ, ನಿಮ್ಮ ಸ್ವಂತ ಜೀವನದಲ್ಲಿ ಆ ಪುಸ್ತಕದ ಪ್ರಭಾವದ ನಿಮ್ಮ ವೈಯಕ್ತಿಕ ನೆನಪುಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುವ ಮೂಲಕ, ಪುಸ್ತಕದ ನಿರಂತರ ಆಕರ್ಷಣೆಯನ್ನು ಆಚರಿಸಲು ನಾವು ತಮ್ಮನ್ನು ಆಹ್ವಾನಿಸುತ್ತೇವೆ.

ಇದನ್ನು ಹಂಚಿಕೊಳ್ಳಿ