ಭರವಸೆಯ ಆಶಾ ಕಿರಣ: ವಿಶ್ವವ್ಯಾಪಿ ಪರಿಸ್ಥಿತಿಯ ಮೇಲೆ ಒಂದು ಆಧ್ಯಾತ್ಮಿಕ ದೃಷ್ಟಿಕೋನ

ಅರ್ಧ ಶತಮಾನಕ್ಕಿಂತ ಹಿಂದೆಯೇ, ಪರಮಹಂಸ ಯೋಗಾನಂದರು, ವಿಶ್ವ ಮತ್ತಷ್ಟು ಉನ್ನತ ಆಧ್ಯಾತ್ಮಿಕ ಯುಗಕ್ಕೆ ಪರಿವರ್ತನೆ ಹೊಂದುವುದಕ್ಕಾಗಿ, ಅದರಲ್ಲಿ ಉಂಟಾಗುವ ಬದಲಾವಣೆಗಳನ್ನು ವಿವರಿಸಿದ್ದರು. ಅವರು ನಿಖರವಾದ ವೇಳಾಪಟ್ಟಿಯನ್ನು ಕೊಡದಿದ್ದರೂ, ಈ ಸವಾಲಿನ ಸಮಯಗಳಲ್ಲಿ, ನಿರ್ವಹಿಸಲು ಬೇಕಾದ ಪ್ರಾಯೋಗಿಕ ಸಲಹೆಯನ್ನು ಮತ್ತು ಹೆಚ್ಚಿನ ಆಧ್ಯಾತ್ಮಿಕ ಸಮಾಲೋಚನೆಯನ್ನೂ ನೀಡಿದರು. ಪರಮಹಂಸಜಿಯವರ ಗುರು ಸ್ವಾಮಿ ಶ್ರೀಯುಕ್ತೇಶ್ವರರು ತಮ್ಮ ಪುಸ್ತಕ, ‘ದಿ ಹೋಲಿ ಸೈನ್ಸ್’ ನಲ್ಲಿ ‘ಪರಮಾಣು ಯುಗ (ದ್ವಾಪರ ಯುಗ)ವು ನಮ್ಮ ಗ್ರಹದ ಜೀವನದಲ್ಲಿ, ಒಂದು ಹೊಸ ಆರೋಹಣದ ಹಂತವಾಗಿರುತ್ತದೆʼ ಎಂದು ಹೇಳಿರುವರು. ಆದಾಗ್ಯೂ, ಪರಮಹಂಸಜಿಯವರು ಇತ್ತೀಚಿಗಷ್ಟೇ ಅಂತ್ಯ ಗೊಂಡಿರುವ ಅಂಧಕಾರ ಯುಗ (ಕಲಿಯುಗ)ದ ಪ್ರಭಾವವು, ಸಮಕಾಲೀನ ನಾಗರೀಕತೆಯ ಮೇಲೆ, ಇನ್ನೂ ಅಧಿಕವಾಗಿ ಬೀರುತ್ತಿರುವುದನ್ನು ಸೂಚಿಸಿದ್ದರು. ಸಾವಿರಾರು ವರ್ಷಗಳಲ್ಲಿ ಸೃಷ್ಟಿಯಾಗಿರುವ, ಲೌಕಿಕ ಆಸಕ್ತಿಗಳ ಯೋಚನಾ ಲಹರಿಗಳು, ಬಹುವಿಧದ ಪದ್ಧತಿಗಳು, ಸಂಪ್ರದಾಯಗಳು ಮತ್ತು ಮೂಢನಂಬಿಕೆಗಳಲ್ಲಿ ಮರುತಳೆದು, ಮಾನವನನ್ನು ಒಬ್ಬರಿಂದ ಮತ್ತೊಬ್ಬರನ್ನು, ದೇಶವನ್ನು ಒಂದನ್ನು ಮತ್ತೊಂದರಿಂದ ಬೇರ್ಪಡಿಸಿವೆ. ಮಾನವ ಜನಾಂಗವು ಇಂತಹ ಗತಕಾಲದ ಭ್ರಮೆಗಳು ಮತ್ತು ಅಸಾಮರಸ್ಯವನ್ನು ತೊಡೆದು ಹಾಕುವ ಈ ಪರಿಸ್ಥಿತಿಯಲ್ಲಿ, ಪರಮಹಂಸಜಿಯವರು ದೇಶಗಳು ಮತ್ತು ಸಮಾಜಗಳು ತಮ್ಮ ವಿಧಿಯಲ್ಲಿ ವಿಪರೀತ ಏರಿಳಿತಗಳನ್ನು ಅನುಭವಿಸಿ, ತದನಂತರ ವಿಶ್ವದಲ್ಲಿ ಸಾಟಿ ಇಲ್ಲದ ಪ್ರಗತಿ ಉಂಟಾಗುವ ಭವಿಷ್ಯವನ್ನು ಕಂಡಿದ್ದರು.

ಈ ವಿಷಯದಲ್ಲಿ ಪರಮಹಂಸ ಯೋಗಾನಂದರ ಸಲಹೆಯನ್ನು ಸಂಕ್ಷಿಪ್ತವಾಗಿಸಿರಿಸುತ್ತಾ, ಗುರುಗಳ ಅತ್ಯಂತ ಮೊದಲಿನ ಹಾಗೂ ಆಪ್ತ ಶಿಷ್ಯರಲ್ಲಿ ಒಬ್ಬರಾದ – ನಮ್ಮ ಗೌರವಾನ್ವಿತ ಮೂರನೆಯ ಅಧ್ಯಕ್ಷರಾದ, ಶ್ರೀ ದಯಾ ಮಾತಾರವರು – ಹೀಗೆ ಹೇಳಿರುವರು:

“ಯಾವಾಗ ಜಗತ್ತಿನ ಸ್ಥಿತಿಗತಿಗಳು ಅಥವಾ ನಾಗರೀಕತೆಗಳು, ಗಮನಾರ್ಹ ಬದಲಾವಣೆಗಳನ್ನು ಹೊಂದುವುದೋ ಆಗ, ಯಾವಾಗಲೂ ಒಂದು ಅಂತರ್ನಿಹಿತ ಸೂಕ್ಷ್ಮ ಕಾರಣವಿದ್ದು – ವ್ಯಕ್ತಿಗತ ಜೀವನಗಳಲ್ಲಿ ಮತ್ತು ಅಂತಾರಾಷ್ಟ್ರೀಯ ಆಧಾರಿತ ವ್ಯವಹಾರಗಳಲ್ಲಿ ಕಾರ್ಯನಿರ್ವಹಿಸುವ, ಒಂದು ಕರ್ಮ ನಿಯಮ ನಿಗೂಢವಾಗಿ ಕಾರ್ಯ ನಿರ್ವಹಿಸುವುದು ಎಂದು ಪರಮಹಂಸ ಯೋಗಾನಂದರು ನಮಗೆ ತಿಳುವಳಿಕೆ ಮೂಡಿಸಿದ್ದರು. ನಮ್ಮ ವೈಯಕ್ತಿಕ ಜೀವನಗಳಲ್ಲಿ, ಸವಾಲುಗಳನ್ನು ಎದುರಿಸುವಂತೆಯೇ, ನಮ್ಮ ನಮ್ಮ ಸರಿಯಾದ ಮನೋವೃತ್ತಿಯು “ಇದರಿಂದ ನಾನು ಏನು ಕಲಿಯುವೆ?” ಎಂಬುದಾಗಿರುತ್ತದೆ. ಅದರಂತೆಯೇ ಇಡೀ ವಿಶ್ವವೇ ಸಂಪೂರ್ಣವಾಗಿ, ನಮ್ಮ ವಿಕಸನದ ಈ ಮುಹೂರ್ತದಲ್ಲಿ, ನಾವು ಯಾವ ಪಾಠವನ್ನು ಸಮೀಕರಿಸಲು ದೈವವು ಇಚ್ಛಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ.

“ಮಾನವ ಜನಾಂಗವು ಸಮತೋಲಿತ ಆಧ್ಯಾತ್ಮಿಕ ಜೀವನದ ಕಲೆಯನ್ನು ಅಂಗೀಕರಿಸಕೊಳ್ಳಬೇಕಾಗುತ್ತದೆ. ಮತ್ತು ಅದು ಒಂದು ವಿಶ್ವ ಕುಟುಂಬದ ರೀತಿಯಲ್ಲಿ ಸರಿದೂಗಿಸಿಕೊಂಡು ಹೋಗುವುದನ್ನು ಕಲಿಯಬೇಕು. ಸ್ಪೋಟಗೊಳ್ಳುತ್ತಿರುವ ‌ತಾಂತ್ರಿಕ ಪ್ರಗತಿಗಳ ಈ ಆಧುನಿಕತೆಯ ಯುಗದಲ್ಲಿ, ನಾವು ಅನುಭವಿಸುವ ಒತ್ತಡಗಳು ಮತ್ತು ನಮ್ಮನ್ನು ಕಾಡುತ್ತಿರುವ ಆತಂಕಗಳು, ಭವಿಷ್ಯದಲ್ಲಿ ಇಂದೋ ಅಥವಾ ನಾಳೆಯೋ ಈ ಪಾಠಗಳನ್ನು ಕಲಿಯುವಂತೆ, ನಮ್ಮನ್ನು ಒತ್ತಾಯ ಪಡಿಸುತ್ತವೆ.

“ಇದನ್ನು ಪರಮಹಂಸಜಿಯವರು ಅನೇಕ ವರ್ಷಗಳ ಹಿಂದೆಯೇ, ಮುಂದಾಲೋಚನೆ ಮಾಡಿದ್ದರು ಮತ್ತು ನಮಗೆ ಅನೇಕ ಸಲ ಹೇಳಿದ್ದರು: ‘ಈ ಜಗತ್ತು ಸರಳ ಜೀವನಕ್ಕೆ ಹಿಂತಿರುಗುವ ದಿನವೂ ಬರುತ್ತಿದೆ. ನಾವು ಭಗವಂತನಿಗಾಗಿ ಸಮಯ ಮಾಡಿಕೊಳ್ಳಲು, ನಮ್ಮ ಜೀವನಗಳನ್ನು ಸರಳವಾಗಿಸಲೇಬೇಕಾಗುತ್ತದೆ. ನಾವು ಭ್ರಾತೃತ್ವದ ಪ್ರಜ್ಞೆಯೊಂದಿಗೆ ಹೆಚ್ಚಾಗಿ ಜೀವಿಸಬೇಕು. ಏಕೆಂದರೆ ನಾಗರೀಕತೆಯು ಉನ್ನತಯುಗಕ್ಕೆ ವಿಕಸನ ಹೊಂದುತ್ತಿದ್ದಂತೆ, ನಾವು ಜಗತ್ತು ಸಣ್ಣದಾಗುವುದನ್ನು ಕಾಣುತ್ತೇವೆ. ದ್ವೇಷ, ಅಸಹನೆಗಳು ಹೋಗಲೇಬೇಕು.’

“ಭರವಸೆಯ ಆಶಾಕಿರಣವಿದೆ – ವೈಯಕ್ತಿಕ ಕುಟುಂಬಗಳಿಗೆ ಹಾಗೂ ವಿಶ್ವ ಕುಟುಂಬದ ದೇಶಗಳ ನಡುವೆ ಇರುವ ಬಾಂಧವ್ಯಗಳಿಗೆ – ನಾವು ನಿಜ ಶಾಂತಿ ಮತ್ತು ಆಧ್ಯಾತ್ಮಿಕ ತಿಳುವಳಿಕೆಗಳನ್ನು ರೂಢಿಸಿ ಪೋಷಿಸಿಕೊಳ್ಳುವಂತಹ ಧ್ಯೇಯಗಳಿಗಾಗಿ ಮತ್ತು ಮೌಲ್ಯಗಳಿಗಾಗಿ ಬಿಡುವಿನ ಸಮಯ ಮಾಡಿಕೊಳ್ಳವುದಾದರೆ.”

ಶ್ರೀ ದಯಾ ಮಾತಾ

“ಜೀಸಸ್‌ ಹೇಳಿರುವಂತೆ, ‘ತನ್ನಷ್ಟಕ್ಕೇ ತಾನೇ ಒಡೆದು ಹೋದ ಮನೆ ತಾಳಲಾರದು.ʼ ವಿಜ್ಞಾನವು ರಾಷ್ಟ್ರಗಳನ್ನು ಒಂದಕ್ಕೊಂದು ಸನಿಹ ತಂದಿರುವ ರೀತಿ ಅನಾದಿ ಕಾಲದ ವಿಶಾಲ ವಿಶ್ವವನ್ನು ಈಗ ಒಂದು ಕುಟುಂಬದಂತೆ ಮಾಡಿದ್ದು ಎಲ್ಲ ಸದಸ್ಯರೂ ಒಬ್ಬರಿಗೊಬ್ಬರು ಸಂಪರ್ಕದಲ್ಲಿದ್ದಾರೆ ಹಾಗೆಯೇ ಅವಲಂಬಿತರಾಗಿದ್ದಾರೆ. ನಮ್ಮ ಈ ಕಾಲದ ಒಡಕಿನ ಪ್ರವೃತ್ತಿಗಳ ಮಧ್ಯದಲ್ಲಿ, ಒಂದು ಸಣ್ಣ ಕುಟುಂಬವೂ ಒಟ್ಟಾಗಿ ಇರಲು ಕಷ್ಟಪಡುತ್ತಿರುವುದನ್ನು ಪರಿಗಣಿಸಿದಲ್ಲಿ, ಈ ಬೃಹತ್ ಜಗತ್ತಿನಲ್ಲಿ ಒಗ್ಗಟ್ಟಿನ ಭರವಸೆಯು ಇದೆಯೇ? ಭರವಸೆ ಆಶಾಕಿರಣ ಇದೆ – ವೈಯಕ್ತಿಕ ಕುಟುಂಬಗಳಿಗೆ ಹಾಗೂ ವಿಶ್ವ ಕುಟುಂಬದ ದೇಶಗಳ ನಡುವೆ ಇರುವ ಬಾಂಧವ್ಯಗಳಿಗೆ – ನಾವು ನಿಜ ಶಾಂತಿ ಮತ್ತು ಆಧ್ಯಾತ್ಮಿಕ ತಿಳುವಳಿಕೆಗಳನ್ನು ರೂಢಿಸಿ ಪೋಷಿಸಿಕೊಳ್ಳುವಂತಹ ಧ್ಯೇಯಗಳಿಗಾಗಿ ಮತ್ತು ಮೌಲ್ಯಗಳಿಗಾಗಿ ಬಿಡುವಿನ ಸಮಯ ಮಾಡಿಕೊಳ್ಳವುದಾದರೆ.”

ಇದನ್ನು ಹಂಚಿಕೊಳ್ಳಿ