ಸನ್ಯಾಸಿಗಳು ನಿರ್ವಹಿಸುತ್ತಿರುವ ಧ್ಯಾನದ ಜೊತೆಗೆ ,ವೈ. ಎಸ್. ಎಸ್. ಭಕ್ತರಿಂದ ನಿರ್ವಹಿಸುವ ಧ್ಯಾನಗಳನ್ನು, ನಮ್ಮ ವಾರದ ಕ್ಯಾಲೆಂಡರ್ ನಲ್ಲಿ ನಾವು ಅವಕಾಶ ನೀಡುತ್ತೇವೆ.
ದಯವಿಟ್ಟು ಗಮನಿಸಿ: ಶನಿವಾರ ಸೆಪ್ಟಂಬರ್ 21ರಿಂದ ಪ್ರತಿ ತಿಂಗಳ ಮೂರನೇ ಶನಿವಾರದಂದು ವೈಎಸ್‌ಎಸ್ ಆನ್‌ಲೈನ್ ಧ್ಯಾನ ಕೇಂದ್ರವು ವೈಎಸ್‌ಎಸ್ ಭಕ್ತಾದಿಗಳಿಂದ ನಡೆಸಲ್ಪಡುವ ಆರು ಘಂಟೆಗಳ ದೀರ್ಘ ಧ್ಯಾನವನ್ನು ಆರಂಭಿಸುತ್ತಿದೆ. ಈ ಧ್ಯಾನ ಕಾರ್ಯಕ್ರಮವನ್ನು ಮಧ್ಯಾಹ್ನ 2:10ರಿಂದ ರಾತ್ರಿ 8:30ರ ವರೆಗೆ ನಡೆಸಲಾಗುತ್ತದೆ.
ವೇಳಾಪಟ್ಟಿ
ಬೆಳಗಿನ ಧ್ಯಾನ
ಇಂಗ್ಲೀಷ್: ಬೆಳಗ್ಗೆ 6:40 – 8:00 ರವರೆಗೆ
ಶನಿವಾರ ಮತ್ತು ಭಾನುವಾರ ಹೊರತುಪಡಿಸಿ ಉಳಿದೆಲ್ಲಾ ದಿನಗಳು
ಸಂಜೆಯ ಧ್ಯಾನ
ಇಂಗ್ಲಿಷ್: ಸಂಜೆ 6:10 – 7:30 ರವರೆಗೆ
ಮಂಗಳವಾರ ಹೊರತು ಪಡಿಸಿ ಬಾಕಿ ಎಲ್ಲಾ ದಿನಗಳು.
ಬುಧವಾರದಂದು ದೀರ್ಘ ಧ್ಯಾನ (ಸಂಜೆ 6:10 – 8:30 ರವರೆಗೆ)
ಇಂಗ್ಲಿಷ್: ಸಂಜೆ 2:10 – 8:30 ರವರೆಗೆ
ಪ್ರತಿ ತಿಂಗಳ ಮೂರನೇ ಶನಿವಾರ (ಸೆಪ್ಟೆಂಬರ್ 21ರಿಂದ)
ಹಿಂದಿ: ಸಂಜೆ 5:10 – 6:30 ರವರೆಗೆ
ಮಂಗಳವಾರ ಹೊರತು ಪಡಿಸಿ ಬಾಕಿ ಎಲ್ಲಾ ದಿನಗಳು.
ಸೋಮವಾರದಂದು ದೀರ್ಘ ಧ್ಯಾನ (ಸಂಜೆ 5:10 – 7:30 ರವರೆಗೆ)
ಬಂಗಾಳಿ: ಸಂಜೆ 6:10 – 7:30 ರವರೆಗೆ.
ಪ್ರತಿ ತಿಂಗಳು ಎರಡನೆಯ ಹಾಗೂ ನಾಲ್ಕನೆಯ ಸೋಮವಾರಗಳಂದು
ಪ್ರತಿ ಧ್ಯಾನ ಪ್ರಕ್ರಿಯೆ ಗುಂಪಿನ ಚೈತನ್ಯದಾಯಕ ವ್ಯಾಯಾಮಗಳ ಅಭ್ಯಾಸದೊಂದಿಗೆ ಪ್ರಾರಂಭಗೊಳ್ಳುತ್ತದೆ. ತದನಂತರ ಪ್ರಾರಂಭಿಕ ಪ್ರಾರ್ಥನೆ, ಆಧ್ಯಾತ್ಮಿಕ ದಿನಚರಿಯಿಂದ ಓದುವಿಕೆ, ದಿವ್ಯಗೀತೆಯ ಗಾಯನ ಹಾಗೂ ಧ್ಯಾನದ ಅವಧಿ ಇರುತ್ತದೆ. ಮುಕ್ತಾಯದ ಮೊದಲು ಪರಮಹಂಸ ಯೋಗಾನಂದರು ಬೋಧಿಸಿರುವ ಉಪಶಮನದಾಯಕ ತಂತ್ರದ ಅಭ್ಯಾಸ ಹಾಗೂ ಮುಕ್ತಾಯದ ಪ್ರಾರ್ಥನೆ ಇರುತ್ತದೆ. ಈ ಧ್ಯಾನ ಪ್ರಕ್ರಿಯೆಯಲ್ಲಿ ಗಮನಿಸಬೇಕಾದ ಅಂಶವೆಂದರೆ, ದಿವ್ಯಗೀತೆಯ ಗಾಯನ ಇಂಗ್ಲಿಷನಲ್ಲಿ ಹಾಗೂ ಯಾವ ಭಾಷೆಯಲ್ಲಿ ಧ್ಯಾನವನ್ನು ನಿರ್ವಹಿಸಲಾಗುತ್ತಿದೆಯೋ, ಆಯಾ ಭಾಷೆಯಲ್ಲಿ ಇರುತ್ತದೆ.
ಬುಧವಾರ ಸಂಜೆ ನಡೆಯುವ ದೀರ್ಘಕಾಲೀನ ಧ್ಯಾನದ ವಿಧಾನ:
ಸುಧೀರ್ಘ ಧ್ಯಾನವು ಚೈತನ್ಯ ದಾಯಕ ವ್ಯಾಯಾಮಗಳ ಸಾಮೂಹಿಕ ಅಭ್ಯಾಸದಿಂದ ಆರಂಭಗೊಂಡು, ಒಂದು ಪ್ರಾರಂಭಿಕ ಪ್ರಾರ್ಥನೆ,ಸ್ಪೂರ್ತಿದಾಯಕ ಓದುಗಳು ,ಭಕ್ತಿ ಗಾಯನ ಮತ್ತು ಸುಮಾರು 30 ರಿಂದ 50 ನಿಮಿಷಗಳ ಎರಡು ಅವಧಿಗಳ ಮೌನ ಧ್ಯಾನಗಳನ್ನು ಒಳಗೊಂಡಿರುತ್ತವೆ. ಪರಮಹಂಸ ಯೋಗಾನಂದರ ಉಪಶಮನದಾಯಕ ತಂತ್ರದ ಅಭ್ಯಾಸ ಹಾಗೂ ಮುಕ್ತಾಯದ ಪ್ರಾರ್ಥನೆಯೊಂದಿಗೆ, ಧ್ಯಾನ ಪ್ರಕ್ರಿಯೆ ಕೊನೆಗೊಳ್ಳುತ್ತದೆ.
ಗಮನದಲ್ಲಿಟ್ಟುಕೊಳ್ಳ ಬೇಕಾದ ಅಂಶವೆಂದರೆ, ಸನ್ಯಾಸಿಗಳಿಂದ ನಿರ್ವಹಿಸಲ್ಪಡುವ ವಿಶೇಷ ಧ್ಯಾನ ಕಾರ್ಯಕ್ರಮಗಳು ಇರುವಾಗ, ಈ ಆನ್ಲೈನ ಧ್ಯಾನಗಳನ್ನು ನಡೆಸಲಾಗುವುದಿಲ್ಲ.
ನೀವು ಆನ್ಲೈನ್ ಧ್ಯಾನ ಕೇಂದ್ರಕ್ಕೆ ಅಪರಿಚಿತರಾಗಿದ್ದಲ್ಲಿ “ಆನ್ಲೈನ ಧ್ಯಾನ ಕೇಂದ್ರದಲ್ಲಿ ಹೇಗೆ ಭಾಗವಹಿಸುವುದು“ಕ್ಕೆ, ದಯಮಾಡಿ ಸಂದರ್ಶಿಸಿ.
ಈ ಕೆಳಗಿನ ವಿಷಯಗಳನ್ನು ತಿಳಿಯಲು ನೀವು ಇಚ್ಚಿಸಬಹುದು: