ಬದುಕುವುದು ಹೇಗೆ ಪ್ರಜ್ಞಾನ

“ಎಲ್ಲರಿಗೂ ಪ್ರೇಮವನ್ನು ಹಂಚುತ್ತ, ಭಗವಂತನ ಪ್ರೇಮವನ್ನು ಅನುಭವಿಸುತ್ತ, ಎಲ್ಲರಲ್ಲೂ ಅವನ ಉಪಸ್ಥಿತಿಯನ್ನು ಕಾಣುತ್ತ – ಕೇವಲ ಒಂದೇ ಒಂದು ಆಕಾಂಕ್ಷೆ ಇರಲಿ – ನಿಮ್ಮ ಪ್ರಜ್ಞೆಯ ಮಂದಿರದಲ್ಲಿ ಅವನ ನಿರಂತರ ಉಪಸ್ಥಿತಿ – ಇದುವೇ ಈ ಜಗತ್ತಿನಲ್ಲಿ ಬದುಕುವ ಮಾರ್ಗವಾಗಿದೆ.“

— ಶ್ರೀ ಶ್ರೀ ಪರಮಹಂಸ ಯೋಗಾನಂದ

ದೈನಂದಿನ ಜೀವನಕ್ಕಾಗಿ ಮಾರ್ಗದರ್ಶನ ಹಾಗೂ ಸ್ಫೂರ್ತಿ

Cat depicting need for guidance.

ಅನಾದಿ ಕಾಲದಿಂದಲೂ ಅನುಭಾವಿಗಳು, ಸಂತರು, ಋಷಿಗಳು ಮತ್ತು ಯೋಗಿಗಳೆಲ್ಲ ನಮಗೆ ಅದೇ ಉತ್ತರವನ್ನು ನೀಡಿದ್ದಾರೆ: ಭಗವಂತನೊಂದಿಗೆ ವೈಯಕ್ತಿಕ ಸಂಬಂಧವನ್ನು ಬೆಳೆಸಿಕೊಳ್ಳುವುದು – ಅದು ನಮ್ಮ ದೈನಂದಿನ ಜೀವನಗಳಲ್ಲಿ ಆ ಅನಂತ ಪರಮಶಕ್ತಿಯೊಡನೆ ಸಂಪರ್ಕವನ್ನು ಕಲ್ಪಿಸುತ್ತದೆ. ಆಧ್ಯಾತ್ಮಿಕ ಬದುಕು ಎಂದರೆ ಆ ಸಂಬಂಧವನ್ನು ಬೆಳೆಸಿಕೊಳ್ಳುವ ಪ್ರಾಯೋಗಿಕ ವಿಧಾನ.

Children meditating.

ಪ್ರತಿ ವಿಷಯದ ಬಗ್ಗೆ ನೀಡಿರುವ ಪ್ರಾಯೋಗಿಕ ಸಲಹೆಯೊಂದಿಗೆ, ಪ್ರತಿ ವಿಭಾಗದಲ್ಲಿ ಒದಗಿಸಲಾಗಿರುವ ದೃಢೀಕರಣಗಳ ಲಾಭವನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಿ. ಸಂತೋಷ, ಉಪಶಮನ, ಶಾಂತಿ ಮತ್ತು ಇನ್ನಿತರ ಆಧ್ಯಾತ್ಮಿಕ ಲಾಭಗಳನ್ನು ಅನುಭವಿಸುವುದಕ್ಕಾಗಿರುವ ನಿಮ್ಮ ವೈಯಕ್ತಿಕ ಪಯಣವನ್ನು ಪ್ರಾರಂಭಿಸಲು ನೀವು ಈಗಲೇ ಇವುಗಳನ್ನು ಅಭ್ಯಾಸ ಮಾಡಿ.

ಹೆಚ್ಚುವರಿಯಾಗಿ, ಪ್ರತಿಯೊಂದು ವಿಷಯವು ಇನ್ನೂ ಹೆಚ್ಚಿನ ಆಳವಾದ ಮಾಹಿತಿಗಾಗಿ ಲಿಂಕ್‌ಗಳನ್ನು ಮತ್ತು ಯೋಗದಾ ಸತ್ಸಂಗ ಸೊಸೈಟಿ ಆಫ್‌ ಇಂಡಿಯಾದವರು ಪ್ರಕಟಿಸಿದ ಅನೇಕ ಪುಸ್ತಕಗಳು, ಮುದ್ರಣಗಳು ಮತ್ತು ಇನ್ನಿತರ ಪ್ರಕಟಣೆಗಳಲ್ಲಿ ಆ ವಿಷಯದ ಕುರಿತು ಹೆಚ್ಚಿನ ಮಾಹಿತಿಗಾಗಿ ಎಲ್ಲಿ ನೋಡಬೇಕು ಎನ್ನುವ ಉಪಯುಕ್ತ ಸಲಹೆಗಳನ್ನು ಒಳಗೊಂಡಿರುತ್ತದೆ.

Topics

ಇದನ್ನು ಹಂಚಿಕೊಳ್ಳಿ