ಕೀರ್ತನೆಯ ದೈವೀ ಕಲೆ

ಯೋಗದ ಒಂದು ರೂಪವಾಗಿ ದಿವ್ಯಗಾಯನ

1920 ರಲ್ಲಿ ಅಮೆರಿಕಕ್ಕೆ ಆಗಮಿಸಿದ ಪರಮಹಂಸ ಯೋಗಾನಂದರು, ಭಾರತದ ಸಾರ್ವತ್ರಿಕ ಕಲೆಯಾದ ಭಕ್ತಿಯ ಗಾಯನವನ್ನು ಪಶ್ಚಿಮಕ್ಕೆ ತಂದು, ಸಾವಿರಾರು ಜನರು ಭಗವದ್‌ ಭಕ್ತಿಯಲ್ಲಿ ಒಟ್ಟಾಗಿ ಭಕ್ತಿಗಾಯನವನ್ನು ಭಜಿಸುವ ಅನುಭವವನ್ನು ಪರಿಚಯಿಸಿದರು.

ನಿಮ್ಮ ಧ್ಯಾನಾಭ್ಯಾಸದಲ್ಲಿ ಭಕ್ತಿಯ ಗಾಯನವನ್ನು ಸೇರಿಸಲು, ನೀವು ಈ ಪುಟವನ್ನು ಆಧಾರವನ್ನಾಗಿ ಬಳಸುತ್ತೀರಿ ಎಂದು ನಾವು ಆಶಿಸುತ್ತೇವೆ. ನೀವು ವ್ಯಕ್ತಿಗತವಾಗಿ ಅಥವಾ ಸಮೂಹದಲ್ಲಿ, ಭಕ್ತಿಗಾಯನವನ್ನು ಭಜಿಸುತ್ತಿರುವಾಗ, ನೆನಪಿರಲಿ ಯೋಗಿಯ ಆತ್ಮಕಥೆ ಯಲ್ಲಿ ಪರಮಹಂಸ ಯೋಗಾನಂದರು ಭಕ್ತಿಗಾಯನವನ್ನು “ಯೋಗ ಅಥವಾ ಆಧ್ಯಾತ್ಮಿಕ ನಿಯಮಪಾಲನೆಯ ಒಂದು ಪರಿಣಾಮಕಾರಿಯಾದ ಸ್ವರೂಪ” ಎಂದು ವಿವರಿಸಿದ್ದಾರೆ.

ಕೇವಲ ಭಾವುಕತೆಯ ಹೆಚ್ಚಳಕ್ಕಿಂತ ಮಿಗಿಲಾಗಿ, ಏಕಾಗ್ರತೆ ಮತ್ತು ಪ್ರಾಮಾಣಿಕ ಸಮರ್ಪಣೆಯೊಂದಿಗೆ, ನೀವು ಈ ದಿವ್ಯ ಕಲೆಯ ರೂಪವನ್ನು ನಿಮ್ಮಲ್ಲಿ ಅಳವಡಿಸಿಕೊಳ್ಳಿ — ಯಾವುದರ ಬಗ್ಗೆ ಪರಮಹಂಸರು ಭರವಸೆ ನೀಡಿರುವರೋ ಅದು ಅದ್ಭುತ ಫಲಿತಾಂಶಗಳನ್ನು ನೀಡುತ್ತದೆ. “ಪ್ರಾರ್ಥನೆ ಮಾಡುವಾಗ ಅಥವಾ ಭಜಿಸುವಾಗ, ಪದಗಳ ಬಗ್ಗೆ ಯೋಚಿಸಬೇಡಿ, ಆದರೆ ಅವುಗಳ ಅರ್ಥದ ಬಗ್ಗೆ ಯೋಚಿಸಿ ಮತ್ತು ಮಾನಸಿಕವಾಗಿ ಉತ್ಕಟತೆಯಿಂದ, ಅವುಗಳ ಹಿಂದಿರುವ ಆಲೋಚನೆಯನ್ನು ಭಗವಂತನಿಗೆ ಸಮರ್ಪಿಸಿ,” ಅವರು ಯೋಗದಾ ಸತ್ಸಂಗ ಪಾಠಗಳಲ್ಲಿ ಹೇಳುತ್ತಾರೆ, “ಮತ್ತು ನಿಮ್ಮ ಪ್ರಾರ್ಥನೆಯು ಒಂದು ತೂಗುಗುಂಡಿನ ತರಹ ನೇರವಾಗಿ ಭಗವಂತನ ಚೇತನದ ಸಾಗರದ ಆಳಕ್ಕೆ ನೇರವಾಗಿ ಬೀಳುತ್ತದೆ.”

ದಿವ್ಯ ಅನುಭೂತಿಯ ಒಂದು ದ್ವಾರ

ಪರಮಹಂಸಜಿಯವರು ಮೇಲೆ ಹೇಳಿರುವಂತೆ, ಭಕ್ತಿಗಾಯನದ ಪದಗಳ ಅರ್ಥದೊಂದಿಗೆ ಆಳವಾಗಿ ಸಂಬಂಧ ಕಲ್ಪಿಸುವುದು ಬಹಳ ಮುಖ್ಯವಾದುದು. ಇದನ್ನು ಮಾಡುವುದಕ್ಕಾಗಿ, ನಾವು ನಿಮ್ಮನ್ನು ವೈಎಸ್‌ಎಸ್/ಎಸ್‌ಆರ್‌ಎಫ್ ಅಧ್ಯಕ್ಷರಾದ ಸ್ವಾಮಿ ಚಿದಾನಂದ ಗಿರಿ ನೇತೃತ್ವದ ನಿರ್ದೇಶಿತ ಧ್ಯಾನದಲ್ಲಿ ಭಾಗವಹಿಸಲು ಆಹ್ವಾನಿಸುತ್ತೇವೆ, ಅದು ಪರಮಹಂಸ ಯೋಗಾನಂದರ ದಿವ್ಯಗಾಯನ “ಇನ್ ದ ಟೆಂಪಲ್‌ ಆಫ್‌ ಸೈಲೆನ್ಸ್” ಹಾಡಿದುದರಲ್ಲಿ ಜನಿತವಾದ ಶಾಂತಿ ಮತ್ತು ಆನಂದವನ್ನು ದೃಶ್ಯೀಕರಿಸುವುದು ಮತ್ತು ಅನುಭವಿಸುವುದರ ಮೇಲೆ ಕೇಂದ್ರೀಕೃತವಾಗಿದೆ ಮತ್ತು — ಒಬ್ಬ ನಿಜವಾದ ಗುರು ಅಥವಾ ಸಂತನ ಉಪಸ್ಥಿತಿಯಲ್ಲಿ ಒಬ್ಬನು ಪಡೆಯುವ ಕೃಪಾಶೀರ್ವಾದ, ಈ ಸಂದರ್ಭದಲ್ಲಿ ಸ್ವತಃ ಪರಮಹಂಸಜಿ ಅವರ ಸಾನಿಧ್ಯದಲ್ಲಿ.

Play Video

ಮೇಲಿನ ನಿರ್ದೇಶಿತ ಧ್ಯಾನವು, ಸ್ವಾಮಿ ಚಿದಾನಂದಜಿಯವರು, ಗುರುಗಳ ಎಲ್ಲಾ ವರ್ಡ್ಸ್‌ ಆಫ್‌ ಕಾಸ್ಮಿಕ್‌ ಚಾಂಟ್ಸ್‌ ಗಳ ಮೌಲ್ಯವನ್ನು ಶ್ಲಾಘಿಸುವುದರೊಂದಿಗೆ ಪ್ರಾರಂಭವಾಗುತ್ತದೆ, ಅದರಲ್ಲಿ ಅವರು ಹೇಳುತ್ತಾರೆ, ಇದರಲ್ಲಿ ಪ್ರತಿಯೊಂದು ಗೀತೆಯೂ ಸಹ “ನಾವು ಆ ಅನುಭೂತಿಯಲ್ಲಿ ನಮ್ಮನ್ನು ಮಗ್ನಗೊಳಿಸಿಕೊಳ್ಳುವಂತಹ ದ್ವಾರವಾಗಬಲ್ಲುದು”, ಯಾವುದನ್ನು ಸ್ವತಃ ಪರಮಹಂಸ ಯೋಗಾನಂದರು ಭಗವಂತನಿಗಾಗಿ ಈ ನಿರ್ದಿಷ್ಟ ಗೀತೆಯನ್ನು ರಚಿಸುವಾಗ ಅನುಭವಿಸಿದರೋ ಅದು.

ಸ್ವಾಮಿ ಚಿದಾನಂದಜಿ ಅವರು ಮುಂದುವರೆದು ವೈಎಸ್‌ಎಸ್/ಎಸ್‌ಆರ್‌ಎಫ್ ತಂತ್ರಗಳಾದ – ಹಾಂಗ್-ಸಾ ತಂತ್ರ, ಓಂ ತಂತ್ರ ಮತ್ತು ಕ್ರಿಯಾಯೋಗವನ್ನು ಉಪಯೋಗಿಸಿಕೊಂಡು ಗುರುಗಳು ನೀಡಿರುವ ಸಾಧನೆಯ (ಆಧ್ಯಾತ್ಮಿಕ ನಿಯಮಪಾಲನೆ) ಅಭ್ಯಾಸದ ಮೂಲಕ – ಮತ್ತು ಭಕ್ತಿಯ ಭಾವದೊಂದಿಗೆ ಹೇಗೆ ಒಬ್ಬನು ಅನಂತ ದಿವ್ಯಪ್ರೇಮಿಯೊಡನೆ ಆಂತರಿಕ ಸಂಸರ್ಗವನ್ನು ಪ್ರವೇಶಿಸುತ್ತಾನೆ ಎಂದೂ ಕೂಡ ಹೇಳುತ್ತಾರೆ. ಆ ತಂತ್ರಗಳನ್ನು ವೈಎಸ್‌ಎಸ್ ಪಾಠಗಳಲ್ಲಿ ಕಲಿಸಲಾಗುತ್ತದೆ.

“ಶಾಂತಿ ಮಂದಿರದಲ್ಲಿ” ಪರಮಹಂಸ ಯೋಗಾನಂದರಿಂದ

ಶಾಂತಿ ಮಂದಿರದಿ, ಶಾಂತಿ ಕುಟೀರದಿ,
ನಿನ್ನನ್ನು ಕಾಣುವೆ, ನಿನ್ನನ್ನು ಸ್ಪರ್ಶಿಸುವೆ,
ನಿನ್ನನ್ನು ಪ್ರೀತಿಸುವೆ,
ಕರೆತರುವೆ ನಿನ್ನನ್ನು ಶಾಂತಿಯ ಪೀಠಕ್ಕೆ.

ಸಮಾಧಿ ಮಂದಿರದಿ, ಸಮಾಧಿ ಕುಟೀರದಿ,
ನಿನ್ನನ್ನು ಕಾಣುವೆ, ನಿನ್ನನ್ನು ಸ್ಪರ್ಶಿಸುವೆ,
ನಿನ್ನನ್ನು ಪ್ರೀತಿಸುವೆ,
ಕರೆತರುವೆ ನಿನ್ನನ್ನು ಆನಂದದ ಪೀಠಕ್ಕೆ.

para-ornament

ಇನ್ನೂ ಹೆಚ್ಚಿನ ಪರಿಶೋಧನೆಗಾಗಿ:

ಇದನ್ನು ಹಂಚಿಕೊಳ್ಳಿ