ರಾಜಕೀಯ ಮತ್ತು ಸರ್ಕಾರಿ ಪ್ರಸಿದ್ಧ ವ್ಯಕ್ತಿಗಳು

“ಪರಮಹಂಸ ಯೋಗಾನಂದರಂತಹ ವ್ಯಕ್ತಿಯೊಬ್ಬರು ಇಂದು ವಿಶ್ವಸಂಸ್ಥೆಯಲ್ಲಿ ಇದ್ದಿದ್ದರೆ, ಪ್ರಪಂಚ ಈಗಿರುವುದಕ್ಕಿಂತ ಹೆಚ್ಚು ಯೋಗ್ಯ ಸ್ಥಳವಾಗಿರುತ್ತಿತ್ತು.”

— ಡಾ. ಬಿನಯ್ ಆರ್ ಸೇನ್, ಭಾರತದ ಮಾಜಿ ರಾಯಭಾರಿ (ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ)

“ನನಗೆ ಅವರ ಬಗ್ಗೆ ಅತ್ಯುನ್ನತ ಗೌರವವಿದೆ.... ನಾನು ಯೋಗಾನಂದರೊಂದಿಗೆ ಹಲವು ವರ್ಷಗಳಿಂದ ದೊಡ್ಡ ಪ್ರಮಾಣದ ಪತ್ರವ್ಯವಹಾರವನ್ನು ಇಟ್ಟುಕೊಂಡಿದ್ದೇನೆ, ವಿವಿಧ ವಿಷಯಗಳ ಬಗ್ಗೆ ದೃಷ್ಟಿಕೋನಗಳನ್ನು ವಿನಿಮಯ ಮಾಡಿಕೊಂಡಿದ್ದೇನೆ. ಅವರ ಪತ್ರಗಳು ನನಗೆ ಬಹಳ ಸ್ಫೂರ್ತಿದಾಯಕ ಮತ್ತು ಸಹಾಯಕವಾಗಿದ್ದವು. ಅವರ ಮರಣವು ಮಾನವೀಯತೆಗೊದಗಿದ ಅಪಾರ ನಷ್ಟ.”

— ಘನತೆವೆತ್ತ ಎಮಿಲಿಯೋ ಪೋರ್ಟಿಸ್‌ ಗಿಲ್‌, ಮೆಕ್ಸಿಕೋದ ಮಾಜಿ ಅಧ್ಯಕ್ಷರು

“ಅವರ ಪರಿಚಯವನ್ನು ಹೊಂದುವ ಭಾಗ್ಯವಿದ್ದವರೆಲ್ಲರೂ ಅವರ ಆತ್ಮೀಯ ವ್ಯಕ್ತಿತ್ವ ಮತ್ತು ಸಹಾನುಭೂತಿಯಿಂದ ಕೂಡಿದ ತಿಳುವಳಿಕೆಯಿಂದ ತೀವ್ರವಾಗಿ ವಂಚಿತರಾಗುತ್ತಾರೆ.”

— ಗುಡ್ವಿನ್ ಜೆ. ನೈಟ್, ಕ್ಯಾಲಿಫೋರ್ನಿಯಾದ ಮಾಜಿ ಗವರ್ನರ್

“ಅವರು ನಿಜವಾಗಿಯೂ ಮಹೋನ್ನತ ವ್ಯಕ್ತಿಯಾಗಿದ್ದರು, ಪ್ರಪಂಚದ ಜನರ ನಡುವೆ ಶಾಂತಿ ಮತ್ತು ತಿಳುವಳಿಕೆಯನ್ನು ತರಲು ಕಟಿಬದ್ದರಾಗಿದ್ದರು. ಅವರು ಈ ಭೂಮಿಯನ್ನು ಬಿಟ್ಟು ಹೊರಟಾಗ, ಅವರು ಇಲ್ಲಿ ಇದ್ದುದರಿಂದಾಗಿಯೇ ಇದು ಸ್ವಲ್ಪ ಉತ್ತಮಸ್ಥಿತಿಗೇರಿತು… ಎಂದು ನಿಜವಾಗಿಯೂ ಹೇಳಬಹುದು.”

— ನ್ಯಾಯಾಧೀಶ ಸ್ಟ್ಯಾನ್ಲಿ ಮಾಸ್ಕ್, ಸುಪ್ರೀಂ ಕೋರ್ಟ್, ಕ್ಯಾಲಿಫೋರ್ನಿಯಾ ಸಂಸ್ಥಾನ

“ಪರಮಹಂಸ ಯೋಗಾನಂದರ ವೈಜ್ಞಾನಿಕ ಬೋಧನೆಗಳು ಮತ್ತು ವಿಚಾರ ವಿನಿಮಯಗಳು ಮಾನವ ನಾಗರಿಕತೆಯ ಮುನ್ನಡೆಯಲ್ಲಿ ಹೆಗ್ಗುರುತುಗಳಾಗಿವೆ.”

— ಜಿ.ಎನ್.ವೈದ್ಯ, ಹೈಕೋರ್ಟ್ ನ್ಯಾಯಾಧೀಶ, ಬಾಂಬೆ

“ನೀವು ಇತ್ತೀಚೆಗೆ ಪಿಟ್ಸ್‌ಬರ್ಗ್‌ನಲ್ಲಿದ್ದಾಗ ನಿಮ್ಮ ಶೈಕ್ಷಣಿಕ ಉಪನ್ಯಾಸಗಳಿಂದ ನಾನು ಪಡೆದ ಪ್ರಯೋಜನಗಳ ಕುರಿತು ನಿಮಗೆ ತಿಳಿಸಲು ನಾನು ಈ ಅವಕಾಶವನ್ನು ತೆಗೆದುಕೊಳ್ಳುತ್ತಿದ್ದೇನೆ. ನೀವು ಈ ದೇಶದಲ್ಲಿ ಉತ್ತಮ ರಚನಾತ್ಮಕ ಶೈಕ್ಷಣಿಕ ಕಾರ್ಯವನ್ನು ನಡೆಸುತ್ತಿದ್ದೀರಿ ಎಂದು ನನಗೆ ತಿಳಿದಿದೆ ಮತ್ತು ನಿಮಗೆ ಎಲ್ಲಾ ಸಹಾಯ ಮತ್ತು ಪ್ರೋತ್ಸಾಹ ಸಿಗಬೇಕು. ಈ ದೇಶದ ಜನರು ನೀವು ಕಲಿಸಿದ ಸಿದ್ಧಾಂತಗಳನ್ನು ಅನುಸರಿಸಿದರೆ, ಬಹುಶಃ ನೈತಿಕ ನ್ಯಾಯಾಲಯದ ಅವಶ್ಯಕತೆಯೇ ಇರುವುದಿಲ್ಲ.”

— ಎ. ಡಿ. ಬ್ರ್ಯಾಂಡನ್, ಮಾರಲ್‌ ಕೋರ್ಟ್ ನ್ಯಾಯಾಧೀಶರು, ಪಿಟ್ಸ್‌ಬರ್ಗ್, ಪಿಎ

“ವಾಷಿಂಗ್ಟನ್‌ನಲ್ಲಿ ಬೇಕಾದಷ್ಟು ಮನಶ್ಶಾಸ್ತ್ರಜ್ಞರು ಇದ್ದಾರೆ. ಆದರೆ [ನಿಮ್ಮ] ತತ್ವಶಾಸ್ತ್ರ ಮತ್ತು ಪದ್ಧತಿ ಸಂಪೂರ್ಣವಾಗಿ ಹೊಸ ಅನುಭವವಾಗಿದೆ ಎಂಬುದು ಸಾರ್ವತ್ರಿಕ ಸಾಕ್ಷಿಯಾಗಿದೆ....ನಿಮ್ಮ ಉಪನ್ಯಾಸಗಳು ಮತ್ತು ತರಗತಿಗಳು ನನ್ನ ಹೆಂಡತಿಗೆ ಮತ್ತು ನನಗೆ, ನಿಮ್ಮಲ್ಲಿ ಹೇಳಿಕೊಳ್ಳಲಾಗದಷ್ಟು ಪ್ರಯೋಜನವನ್ನು ನೀಡಿವೆ. ನರೋದ್ರೇಕ, ಚಿಂತೆ ಮತ್ತು ಆಧುನಿಕ ಅಮೆರಿಕ ಜೀವನದ ಅನಿಶ್ಚಿತತೆಗಳು, ಅಂತೆಯೇ ಪ್ರಾಯೋಗಿಕ ಜೀವನದ ಕಠಿಣ ವಾಸ್ತವಗಳೊಂದಿಗೆ ನಮ್ಮ ಸಾಂಪ್ರದಾಯಿಕ ಕ್ರಿಶ್ಚಿಯನ್ ಧರ್ಮವನ್ನು ಸರಿಹೊಂದಿಸಬಹುದಾದ ಆಧ್ಯಾತ್ಮಿಕ ತಿಳುವಳಿಕೆಗಾಗಿರುವ ಹೆಬ್ಬಯಕೆಯು ನಿಮ್ಮನ್ನು ಆಶ್ರಯಿಸುವಂತೆ ಪ್ರೇರೇಪಿಸಿತು. ನಿಮ್ಮ ಉದಾತ್ತ ಮತ್ತು ಪ್ರಾಯೋಗಿಕ ತತ್ತ್ವಶಾಸ್ತ್ರವನ್ನು ಕೇಳುವುದರಿಂದ ನಮಗೆ ಶಾಂತಿ ಮತ್ತು ನೆಮ್ಮದಿ ದೊರೆತಿದೆ.”

— ಲೂಯಿಸ್ ಇ. ವ್ಯಾನ್ ನಾರ್ಮನ್, ಸಂಪಾದಕ, "ದಿ ನೇಷನ್ಸ್ ಬಿಸಿನೆಸ್"; ವಾಣಿಜ್ಯ ಅಧಿಕಾರಿ, ವಾಣಿಜ್ಯ ಇಲಾಖೆ

“ನಿಸ್ಸಂದೇಹವಾಗಿ, ಅವರ ಮೋಹಕ ಮತ್ತು ಸುಂದರ ಶಾರೀರಿಕ ಅಸ್ತಿತ್ವವು, ಅವರು ಹೊಂದಿದ್ದ ಆತ್ಮದ ಸೂಚ್ಯಂಕವಾಗಿತ್ತು ಎಂಬುದಷ್ಟೇ ಅಲ್ಲದೆ ಮಾನವೀಯತೆಯೆಡೆಗೆ ಪರಮಹಂಸಜಿಯವರಿಗಿದ್ದ ಆಳವಾದ ವಾತ್ಸಲ್ಯ ಮತ್ತು ಪ್ರೀತಿಯು — ಸ್ನೇಹಭಾವವಿಲ್ಲದವರೆಡೆಗೂ ಮತ್ತು ಅವರ ನಂಬಿಕೆಯನ್ನು ಹಂಚಿಕೊಳ್ಳಲು ಇಷ್ಟವಿಲ್ಲದವರೆಡೆಗೂ — ಅವರಿಗೆ, ಅವರ ಸಹಜೀವಿಗಳ ನಡುವೆ ಸರಿಸಾಟಿಯಿಲ್ಲದಂತಹ ಒಂದು ಸ್ಥಾನವನ್ನು ನೀಡಿತು.

“ತಾವು ಜನ್ಮವೆತ್ತಿದ ದೇಶದಿಂದ ಅವರು ಅಮೆರಿಕೆಗೆ ಆತ್ಮದ ಪ್ರಶಾಂತತೆ ಮತ್ತು ಜೀವನದ ಮಾನುಷ ಮತ್ತು ಆಧ್ಯಾತ್ಮಿಕ ಮೌಲ್ಯಗಳ ತಿಳುವಳಿಕೆಯನ್ನು ತಂದರು. ಇವು ಆಧುನಿಕ ಸಮಾಜದ ಎಲ್ಲ ವರ್ಗದ ಜನರಿಗೂ ಮನಸ್ಸಿನ ಶಾಂತಿಯನ್ನು ಪಡೆಯಲು ಸಹಾಯ ಮಾಡಿದುದಷ್ಟೇ ಅಲ್ಲದೆ, ಭಾರತ ಮತ್ತು ಅಮೆರಿಕದ ಜನಗಳ ನಡುವೆ ತಿಳುವಳಿಕೆ ಮೂಡಿಸಲೂ ಸಹಾಯ ಮಾಡಿತು.

“ಶಾಂತಿದೂತರಾಗಿ ಮತ್ತು ಮನುಷ್ಯನ ಭ್ರಾತೃತ್ವದಲ್ಲಿ ನಂಬಿಕೆಯುಳ್ಳವರಾಗಿ, ಯೋಗಾನಂದರು ಪೂರ್ವ ಮತ್ತು ಪಶ್ಚಿಮಗಳ ನಡುವಿನ ತಿಳುವಳಿಕೆ ಮತ್ತು ಸ್ನೇಹಕ್ಕಾಗಿ ತಮ್ಮ ಜೀವನ ಮತ್ತು ಎಲ್ಲಾ ಶಕ್ತಿ ಮತ್ತು ತಮ್ಮಲ್ಲಿದ್ದ ಸಂಪನ್ಮೂಲಗಳನ್ನು ಸಮರ್ಪಿಸಿದರು.”

— ಮುಲ್ಕ್ ರಾಜ್ ಅಹುಜಾ, ಭಾರತದ ಕಾನ್ಸುಲ್ ಜನರಲ್

ಇದನ್ನು ಹಂಚಿಕೊಳ್ಳಿ