ನಲ್ಮೆಯ ದಿವ್ಯಾತ್ಮರೇ,
ಇತ್ತೀಚಿನ ವಾರಗಳಲ್ಲಿ ಭಾರತಾದ್ಯಂತ ಹರಡಿದ, ಕೋವಿಡ್19 ಜಾಗತಿಕ ಸಾಂಕ್ರಾಮಿಕ ರೋಗದ ಎರಡನೆಯ ಅಲೆ, ಹಿಂದೆಂದೂ ಕಂಡಿಲ್ಲದ, ಮಾನವ ಜನಾಂಗದ ವಿಷಮ ಪರಿಸ್ಥಿತಿ, ದೇಶಾದ್ಯಂತ ಪ್ರತಿಯೊಬ್ಬರ ಕುಟುಂಬ ಮತ್ತು ಸ್ನೇಹಿತರ ಮೇಲೆ ಪರಿಣಾಮ ಬೀರಿದೆ.
ವೈ ಎಸ್ ಎಸ್/ಎಸ್ ಆರ್ ಎಫ್ ಅಧ್ಯಕ್ಷರ ಸಹಾಯ.
ನಮ್ಮ ಗೌರವಾನ್ವಿತ ಅಧ್ಯಕ್ಷರು ಶ್ರೀ ಶ್ರೀ ಸ್ವಾಮಿ ಚಿದಾನಂದ ಗಿರಿಯವರು, ಊಹಿಸಲಾಗದಂತಹ ಸವಾಲುಗಳನ್ನು ಎದುರಿಸುತ್ತಿರುವ ಭಾರತದ ಜನತೆಗೆ ಮತ್ತು ಜಗತ್ತಿನ ಎಲ್ಲರಿಗೂ,ಸಮಯೋಚಿತ ಭರವಸೆಯ ಸಾಂತ್ವನ, ಹೃದಯಸ್ಪರ್ಶಿ, ಉತ್ಸಾಹದಾಯಕ ಸಂದೇಶವನ್ನು ನೀಡಿರುತ್ತಾರೆ.
ವೈ ಎಸ್ ಎಸ್ ಕೇಂದ್ರಗಳು, ಮಂಡಳಿಗಳು ಇಟ್ಟ ಮೊದಲ ಹೆಜ್ಜೆ
ಕೋವಿಡ್-19 ಸಮಗ್ರ ಜಾಗತಿಕ ಸಾಂಕ್ರಾಮಿಕ ರೋಗದ ಎರಡನೆಯ ಅಲೆಯ ಮೊದಲ ದಿನಗಳಲ್ಲಿ, ಸ್ವಾಮಿ ಚಿದಾನಂದಜಿ ಅವರಿಂದ ಉತ್ಸಾಹ ಪಡೆದು ಉತ್ತೇಜಿತರಾಗಿ, ಭಾರತ ಉಪಖಂಡದಾದ್ಯಂತ,ಹರಡಿದ ಯಾತನೆಗೆ ಸಂವೇದಿಸಿ, ಜನತೆಯ ಅವಶ್ಯಕತೆಗಳನ್ನು ಅರಿತು, ವೈ ಎಸ್ ಎಸ್, ತಮಗೆ ಎಟುಕುವಷ್ಟು ಭಾರತದಾದ್ಯಂತ ಸಾಧ್ಯವಾದಷ್ಟು ಜನತೆಗೆ ಪರಿಹಾರ ನೀಡಲು ನಿಶ್ಚಯಿಸಿತು. ದೇಶಾದ್ಯಂತ ಹರಡಿರುವ ವೈ ಎಸ್ ಎಸ್ ಧ್ಯಾನ ಕೇಂದ್ರಗಳಲ್ಲೂ ಮಂಡಳಿಗಳಲ್ಲೂ, ಸೇವೆ ಸಲ್ಲಿಸುತ್ತಿರುವ ನಮ್ಮ ಅಗಾಧ ಆಧ್ಯಾತ್ಮ ಕುಟುಂಬಗಳ ಭಕ್ತರನ್ನು ಯೋಜನೆಯ ಸಫಲತೆಯ ಕಡೆಗೆ ತಿರುಗಿಸಿ ಅಳವಡಿಸಿಕೊಳ್ಳುವುದು ಅತ್ಯುತ್ತಮ ಮಾರ್ಗವೆಂದು ನಾವು ಕೂಡಲೇ ಗುರುತಿಸಿದೆವು. ವೀಡಿಯೋ ಕರೆಗಳ ಮೂಲಕ ವೈ ಎಸ್ ಎಸ್ ಕೇಂದ್ರಗಳ ಆಡಳಿತ ವರ್ಗವನ್ನು ಸಂಪರ್ಕಿಸಿ, ಈ ಉದಾತ್ತ ಕಾರಣಕ್ಕಾಗಿ ತಮ್ಮೆಲ್ಲಾ ಶಕ್ತಿ, ಸಂಪನ್ಮೂಲಗಳನ್ನು, ಸಮಯವನ್ನು ಬಳಸಿ ಸೇವೆ ಸಲ್ಲಿಸಲು, ಸಿದ್ಧರಾಗಿರುವ ನೂರಾರು ಭಕ್ತ-ಸ್ವಯಂಸೇವಕರ ಒಂದು ಪಟ್ಟಿಯನ್ನು ತಯಾರಿಸಿದೆವು. ಈ ಸ್ವಯಂಸೇವಕರು, ಸರ್ಕಾರೇತರ ಸಂಸ್ಥೆಗಳ ಸಹಾಯದಿಂದ ಮತ್ತು ಸ್ಥಳೀಯ ಆಡಳಿತಗಾರರ ಒಡಗೂಡಿ ಅವರ ಸಹಾಯದೊಡನೆ ವೈಎಸ್ಎಸ್ನ ಈ ಪರಿಹಾರ ಯೋಜನೆಯನ್ನು ಜಯಪ್ರದವಾಗಿ ಸಾಕಾರಗೊಳಿಸಿದರು.
ಹಲವಾರು ಭಕ್ತರು ತಮ್ಮ ಸ್ವಂತ ಕುಟುಂಬದ ರಕ್ಷಣೆಯನ್ನು ಮರೆತು ಅವಶ್ಯಕತೆಯಿರುವವರಿಗೆ ಆಹಾರವನ್ನು, ರೋಗಿಗಳಿಗೆ ಔಷಧಿಗಳನ್ನು, ಆಸ್ಪತ್ರೆಗಳಿಗೆ ಮತ್ತು ಸರ್ಕಾರೇತರ ಸಂಸ್ಥೆಗಳಿಗೆ ಸುರಕ್ಷತಾ ಕಿಟ್ಗಳನ್ನು, ಜೀವರಕ್ಷಕ ಸಾಧನಗಳನ್ನು ಒದಗಿಸಿದರು. ಸಾವಿರಾರು ಅವಶ್ಯಕತೆಯುಳ್ಳ, ಭರವಸೆಯಿಂದ ಎದುರು ನೋಡುತ್ತಿರುವವರವರೆಗೂ ಈ ಪರಿಹಾರವನ್ನು ತಲುಪಿಸಲು, ಈ ನಮ್ಮ ಸ್ವಯಂ ಸೇವಕ ವರ್ಗದವರು, ಮಾಡಿರುವ ಅಸಂಖ್ಯಾತ ವೈಯಕ್ತಿಕ ತ್ಯಾಗಗಳನ್ನು ನಾವು ಪೂರ್ಣವಾಗಿ ಅರಿಯಲಾರೆವು. ಅಲ್ಪ ಸಮಯದಲ್ಲಿ, ಹಿಂದೆಂದೂ ನಡೆಯದ ರೀತಿಯಲ್ಲಿ, ಕೋವಿಡ್ 19 ರ ಯಾತನೆಯ ಉತ್ಕಟಾವಸ್ಥೆಯ ಸಮಯದಲ್ಲಿ , ಭಾರತದಲ್ಲಿ, ಈ ಪರಿಹಾರ ಪ್ರಯತ್ನಗಳನ್ನು ಸಂಪೂರ್ಣ ಆಯಾಮದಲ್ಲಿ ನೆರವೇರಿಸಲು ಸಾಧ್ಯವಾಯಿತು.
ಭಾರತಾದ್ಯಂತ ಜನತೆ ವೈ ಎಸ್ ಎಸ್ ಸಹಾಯವನ್ನು ಪಡೆದರು
ಉತ್ತರದ, ಎತ್ತರದ ಹಿಮಾಲಯ ಪರ್ವತಗಳಲ್ಲಿ ಸಿಲುಕಿಕೊಂಡಿದ್ದ ಸಾಧುಗಳಿಗೂ, ದೂರದ ದಕ್ಷಿಣ ಕೇರಳದ ಹಳ್ಳಿಗಳ ಆದಿವಾಸಿಗಳಿಗೂ ಮತ್ತು ಮಧ್ಯದ ಅನೇಕ ರಾಜ್ಯಗಳಿಗೂ ವೈ ಎಸ್ ಎಸ್ ಪರಿಹಾರವನ್ನು ನೀಡಲು ಸಾಧ್ಯವಾಯಿತು. ಅತ್ಯಂತ ಅವಶ್ಯಕವಾಗಿ ಬೇಕಾಗಿದ್ದ ಬೇಯಿಸಿದ ಆಹಾರ ಅಥವಾ ಆಹಾರ ಸಾಮಗ್ರಿಗಳನ್ನು ಸಾವಿರಾರು ಅಗತ್ಯವುಳ್ಳ ಜನರಿಗೆ ನೀಡಲಾಯಿತು. ಆಸ್ಪತ್ರೆಯಲ್ಲಿ ಹಾಸಿಗೆಗಳು, ವ್ಹೀಲ್ ಚೇರಗಳು, ಪಿಪಿಇ ಕಿಟ್ ಗಳು, ಗುಣಮಟ್ಟದ ಮಾಸ್ಕಗಳು, ಹ್ಯಾಂಡ್ ಸನಿಟಟೈಸರ್ , ಅಗತ್ಯ ಔಷಧಿಗಳನ್ನು,ಕೋವಿಡ್ ಚಿಕಿತ್ಸೆಗೆ ಬೇಕಾದ ಔಷಧಿಗಳು,ಪಲ್ಸ್ ಆಕ್ಸಿಮೀಟರ್ ಗಳು, ಜ್ವರಮಾಪಕಗಳು, ಮತ್ತಿತರೆ ಸಾಮಗ್ರಿಗಳನ್ನು ದೇಶದ ವಿವಿಧ ಭಾಗಗಳಲ್ಲಿ ಕೆಲವು ಚಿಕ್ಕ ಮತ್ತು ದೊಡ್ಡ ಕೋವಿಡ್ ಚಿಕಿತ್ಸಾ ಸೌಲಭ್ಯಗಳ ಘಟಕಗಳಿಗೆ ದೇಶಾದ್ಯಂತ ಒದಗಿಸಲಾಯಿತು.
ಆಕ್ಸಿಜನ್ ಕನ್ಸೆಂಟ್ರೇಟರ್, ಬಿಪ್ಯಾಪ್ ವೆಂಟಿಲೇಟರ್ಸ್ ಒದಗಿಸಲಾಯಿತು.
ಕೆಲವು ಆಸ್ಪತ್ರೆಗಳು ತಮ್ಮ ಚಿಕಿತ್ಸಾ ಕೊಠಡಿಗಳನ್ನು ಕೋವಿಡ್ ಚಿಕಿತ್ಸೆಯ ಸೌಲಭ್ಯತೆಗೆ ಏರಿಸಲು ಇಚ್ಚಿಸಿದ್ದವು. ಆಕ್ಸಿಜನ್ ಕನ್ಸೆಂಟ್ರೇಟರ್ ಮತ್ತು ಬಿಪ್ಯಾಪ್ ವೆಂಟಿಲೇಟರ್ ಯಂತ್ರಗಳನ್ನು ವೈ ಎಸ್ ಎಸ್ ಒದಗಿಸಿತು. ಕೇರಳದ ಆಸ್ಪತ್ರೆಯೊಂದರಲ್ಲಿ ಆಕ್ಸಿಜನ್ ಅವಶ್ಯಕತೆ ಇರುವ ರೋಗಿಗಳಿಗಾಗಿ ಆಕ್ಸಿಜನ್ ಡೆಲಿವರಿ ಸಿಸ್ಟಮನ್ನು ನಿಯೋಜಿಸಲು ವೈ ಎಸ್ ಎಸ್ ಸಹಾಯ ಮಾಡಿತು.
ಆಸ್ಪತ್ರೆಗಳಲ್ಲಿ ಆಕ್ಸಿಜನ್ ಗಾಗಿ ಹಾಸಿಗೆಗಳು ಸಿಗದಿದ್ದಾಗ ಆಕ್ಸಿಜನ್ ಕನ್ಸೆಂಟ್ರೇಟರ್ ಗಳ ಅವಶ್ಯಕತೆ ಎಷ್ಟೆಂದು ವೈ ಎಸ್ ಎಸ್ ಅರಿತು ನಮ್ಮ ದೊಡ್ಡ ಕೇಂದ್ರ ಮತ್ತು ಮಂಡಳಿಗಳಲ್ಲಿ ಆಕ್ಸಿಜನ್ ಕನ್ಸೆಂಟ್ರೇಟರ್ ಗಳನ್ನು ಒದಗಿಸಿದೆ. 40 ಕ್ಕಿಂತ ಹೆಚ್ಚು ಆಕ್ಸಿಜನ್ ಕನ್ಸೆಂಟ್ರೇಟರ್ ಗಳನ್ನು ಒದಗಿಸಿದೆ. ಆಕ್ಸಿಜನ್ ಕನ್ಸೆಂಟ್ರೇಟರ್ ಗಳ ಬಗ್ಗೆ, ನಿಪುಣ ತಂಡ, ಅವುಗಳನ್ನು ಉಪಯೋಗಿಸುವ ಕ್ರಮವನ್ನು ವಿವರವಾಗಿ ಬರವಣಿಗೆಯ ಮೂಲಕ ಮತ್ತು ವೀಡಿಯೋ ಸೂಚನೆಗಳ ಮೂಲಕ ಒದಗಿಸಿತು. ಅವುಗಳ ಬಳಕೆ ಮತ್ತು ನಿರ್ವಹಣೆಯ ಬಗ್ಗೆ ಸ್ವಯಂಸೇವಕರಿಗೆ ತರಬೇತಿ ನೀಡಿತು.
ವೈ ಎಸ್ ಎಸ್ ಭಕ್ತರೂ ತಮ್ಮ ಮೂಲ ಸಾಧನ ಸಂಪತ್ತಿನ ಮೂಲಕ ಸಹಾಯಹಸ್ತವನ್ನು ನೀಡಿದುದು.
ಕೆಲವು ವೈಎಸ್ಎಸ್ ಕೇಂದ್ರಗಳು ನಮ್ಮಿಂದ ನಿರೀಕ್ಷಿಸದೆ, ತಮ್ಮ ಪರಿಹಾರ ಕಾರ್ಯಕ್ರಮವನ್ನು ತಮ್ಮದೇ ಮೂಲಸಂಪತ್ತಿನಿಂದ ಸಂಪೂರ್ಣವಾಗಿ ಪ್ರಾರಂಭಿಸಿದರು. ವೈಎಸ್ಎಸ್ ತಿರುಪತಿ ಧ್ಯಾನಕೇಂದ್ರ ಆಕ್ಸಿಜನ್ ಕನ್ಸೆಂಟ್ರೇಟರ್ ಸರಬರಾಜಿನ ಸೇವೆಯನ್ನು ಮಾಡಿದರು, ಹಾಗೆಯೇ ರಾಯಪೂರಿನ ವೈ ಎಸ್ ಎಸ್ ಧ್ಯಾನ ಕೇಂದ್ರ ರೋಗಿಗಳನ್ನು, ಚಿಕಿತ್ಸಾ ಕೇಂದ್ರಗಳಿಗೆ ತಲುಪಿಸಲು ಒಂದು ಅಂಬುಲೆನ್ಸ್ ಅನ್ನು ಬಾಡಿಗೆಗೆ ಪಡೆಯಿತು. ಹಲವು ಭಕ್ತರು ತಮ್ಮ ಅಕ್ಕಪಕ್ಕದ ಸೋಂಕಿತ ಜನರಿಗೆ ಸಹಾಯ ನೀಡಲು ತಮ್ಮ ಜೀವನದ ಉಳಿಕೆಯ ಧನವನ್ನು ಸಹ ಉಪಯೋಗಿಸಿದರು.
ದ್ವಾರಾಹಟ್ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಪರಿಹಾರ ಕಾರ್ಯ.
ವೈಎಸ್ಎಸ್ ದಿಂದ ದ್ವಾರಾಹಟ್ ಸುತ್ತಲೂ ನಡೆದ ಪರಿಹಾರ ಕಾರ್ಯಕ್ರಮ ಬಗ್ಗೆ ವಿಶೇಷ ಸೂಚನೆಯ ಅಗತ್ಯವಿದೆ. ಸ್ಥಳೀಯ ಯುವ ಸಹಾಯಕರು ಕೋವಿಡ್ ಸಾಂಕ್ರಾಮಿಕ ರೋಗ ಪರಿಹಾರಕ್ಕೆ,ಚಟುವಟಿಕೆಯಿಂದ ಹಳ್ಳಿಯ ಜನರಿಗೆ ಸಹಾಯ ನೀಡಿದರು. ವೈಎಸ್ಎಸ್ನ ಭಕ್ತ ಹಾಗು ಮುಂಬೈನ ವೈದ್ಯರೊಬ್ಬರ ಉತ್ಕಟ ಸಹಾಯ ಹಾಗು ನಿಸ್ವಾರ್ಥ ಸೇವೆಯಿಂದ ವೈಎಸ್ಎಸ್, ದ್ವಾರಾಹಟ್ ಸುತ್ತಲಿನ ಹಳ್ಳಿಗಳಲ್ಲೂ, ಬಾಬಾಜಿ ಗುಹೆಯ ಬಳಿಯೂ ಕೋವಿಡ್ ಚಿಕಿತ್ಸಾ ಶಿಬಿರಗಳನ್ನು ಏರ್ಪಡಿಸಲಾಯಿತು.ಈ ಸೇವೆಯು ಕೃತಜ್ಞತಾ ಪೂರ್ವಕವಾಗಿ ಗ್ರಾಮಸ್ಥರಿಂದ ಸ್ವೀಕರಿಸಲ್ಪಟ್ಟಿತು, ಮತ್ತು ಆಳವಾಗಿ ಸ್ಥಳೀಯ ಆಡಳಿತಗಾರರಿಂದ ಶ್ಲಾಘಿಸಲ್ಪಟ್ಟಿತು. ಮತ್ತಾವ ಸಂಸ್ಥೆಗಳು, ಈ ಗ್ರಾಮಸ್ಥರ ಸೀಮಿತ ಪ್ರಯತ್ನಗಳಿಗೆ ಈ ದೂರದ ಮತ್ತು ಒಂಟಿಯಾಗಿರುವ ಗ್ರಾಮಗಳಿಗೆ ಸಹಾಯ ನೀಡಲು ಮುಂದೆ ಬಂದಿರಲಿಲ್ಲ.
ದ್ವಾರಾಹಟ್ನ ಸರ್ಕಾರಿ ಆಸ್ಪತ್ರೆಗೆ ವೈಎಸ್ಎಸ್ ಒಂದು ಅಂಬುಲೆನ್ಸ್ ಅನ್ನು ನೀಡಿದುದು.
ದ್ವಾರಾಹಟ್ ಸರ್ಕಾರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಯ ಕೋರಿಕೆಯ ಮೇರೆಗೆ, ಅತ್ಯಂತ ಅವಶ್ಯಕತೆ ಇದ್ದ ಪೂರ್ಣ ಸುಸಜ್ಜಿತ ವಾಹನವೊಂದನ್ನು ವೈಎಸ್ಎಸ್ ಒದಗಿಸಿತು. ಅತ್ಯಂತ ಗಂಭೀರ ಪರಿಸ್ಥಿತಿಯಲ್ಲಿರುವ ಸೋಂಕಿತ ರೋಗಿಗಳನ್ನು ದ್ವಾರಾಹಟ್ ನಿಂದ ಆಲ್ಮೊರ ,ಹಲ್ದ್ವಾನಿ ಕೋವಿಡ್ ಉನ್ನತ ತಂತ್ರಜ್ಞಾನದ ಚಿಕಿತ್ಸಕ ಘಟಕಗಳಿಗೆ ತಲುಪಿಸಲು ಅತ್ಯಂತ ಸಹಾಯಕಾರಿ ಎಂದು ನಿರೂಪಿಸಿತು. ಆಲ್ಮೊರದ ಜಿಲ್ಲಾ ಮ್ಯಾಜಿಸ್ಟ್ರೇಟ್ ಒಂದು ಕೃತಜ್ಞತಾಪೂರ್ವಕ ವಿಶೇಷ ಪತ್ರವನ್ನು ವೈಎಸ್ಎಸ್ ಕೇಂದ್ರಕ್ಕೆ, ಸಹಾಯವನ್ನು ಶ್ಲಾಘಿಸಿ ಬರೆದಿದ್ದಾರೆ. ಆಂಬುಲೆನ್ಸ್ ನ ದೊರೆಯುವಿಕೆಯನ್ನು ದ್ವಾರಾಹಟ್ ವಾಸಿಗಳು ಆಳವಾಗಿ ಶ್ಲಾಘಿಸಿದರು, ಸ್ಥಳೀಯ ಪತ್ರಿಕೆಗಳು ಮತ್ತು ವಾರ್ತಾವಾಹಿನಿಗಳು ಈ ಮಾಹಿತಿಯನ್ನು ವಿವರವಾಗಿ ಪ್ರಕಟಿಸಿದವು.
ವಿಶ್ವಾದ್ಯಂತ ಸಹಾಯ ಹರಿದು ಬಂದಿರುವ ಬಗೆ
ವಾರ್ತೆಯ ಮೂಲಕ ಮತ್ತು ಮಾಧ್ಯಮದ ಮೂಲಕ ಭಾರತದ ಗಂಭೀರ ಪರಿಸ್ಥಿತಿಯ ಸುದ್ದಿ ಹರಡಿದಂತೆ , ವಿಶ್ವಾದ್ಯಂತ ವೈಎಸ್ಎಸ್ /ಎಸ್ ಆರ್ ಎಫ್ ಭಕ್ತರಿಂದ ಕರೆಗಳನ್ನು ಸಂದೇಶಗಳನ್ನು ವೈಎಸ್ಎಸ್ ಪಡೆಯಲಾರಂಭಿಸಿತು. ಇವು ಅನುಕಂಪ, ಪ್ರಾರ್ಥನಾಮಯ ಮತ್ತು ಧನ ಸಹಾಯದ ಒತ್ತಾಸೆಗಳನ್ನು ಒಳಗೊಂಡಿದ್ದವು. ಅನೇಕ ಭಕ್ತರ ಪ್ರೇಮದ ಮಹಾಪೂರ ನಮ್ಮನ್ನು ಆಳವಾಗಿ ಸ್ಪರ್ಶಿಸಿದೆ. ನಮ್ಮ ಮಹಾನ್ ಗುರುಗಳು ತಮ್ಮ ಪ್ರೇಮ ಮತ್ತು ಅನುಗ್ರಹವನ್ನು ಭಾರತ ದೇಶಕ್ಕೆ ಇಂತಹ ಅನುಕಂಪ ಪೂರಿತ ಆತ್ಮಗಳ ಮೂಲಕ ನಮಗೆ ತಲುಪಿಸುತ್ತಿರುವರು ಎಂಬುದನ್ನು ನಾವು ಅರಿತಿದ್ದೇವೆ. ಪ್ರತಿಯೊಬ್ಬರಿಗೂ ನಮ್ಮ ಆಳವಾದ ಕೃತಜ್ಞತೆಗಳನ್ನು ಅರ್ಪಿಸುತ್ತೇವೆ.
ದ್ವಾರಾಹಟ್ ಸುತ್ತಮುತ್ತಲು ಈ ಪರಿಹಾರ ಕ್ರಮವನ್ನು ಸಂಘಟನೆಗೊಳಿಸುತ್ತಿದ್ದ ಭಕ್ತರೊಬ್ಬರು ಹೀಗೆ ಹೇಳುತ್ತಾರೆ:
ಎಂದೂ ಯಾರು ಭೇಟಿ ನೀಡದ ದ್ವಾರಾಹಟ್ ಮತ್ತು ಸುತ್ತಮುತ್ತಲಿನ ಹಳ್ಳಿಗಳ ಜನಗಳಿಗೆ, ಸ್ವಯಂಸೇವಕರ ಮತ್ತು ಭಕ್ತ ವೈದ್ಯರ ಅರ್ಪಣಾಯುಕ್ತ ಸೇವೆಯು ಸ್ಪೂರ್ತಿದಾಯಕ. ವೈದ್ಯಕೀಯ ಸಲಹೆಗಳನ್ನು, ಔಷಧಗಳನ್ನು ಒದಗಿಸಿ, ಈ ಸಾಂಕ್ರಾಮಿಕ ರೋಗ ಹರಡದಂತೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಯ ಕ್ರಮಗಳನ್ನು ಗ್ರಾಮ ವಾಸಿಗಳಿಗೆ ಉಪದೇಶಿಸಿ ನಮ್ಮ ತಂಡ ಅನೇಕ ಪ್ರಶಸ್ತ ಜೀವಗಳನ್ನು ಉಳಿಸಿದೆ. – ಟಿ ಎಮ್. ದ್ವಾರಾಹಟ್
ಮತ್ತೊಬ್ಬ ಭಕ್ತ ಸರಕಾರಿ ನೌಕರ, ಕೇರಳದ ಕಣ್ಣೂರು ಜಿಲ್ಲೆಯ ದೂರದ ಪ್ರದೇಶದ ಆದಿವಾಸಿಗಳ ಪುನರ್ ವಸತಿಗೆ ಸಹಾಯ ಮಾಡುತ್ತಾ ಹೀಗೆ ಹೇಳುತ್ತಾರೆ:
“ಈ ಪ್ರದೇಶದಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇಲ್ಲ. ಇಲ್ಲಿಯ ವಾಸಿಗಳಿಗೆ ವ್ಯವಸಾಯದಿಂದ ಅತ್ಯಂತ ಕಿರು ಆದಾಯ. ಈ ಸಾಂಕ್ರಾಮಿಕ ರೋಗ ತಟ್ಟಿದಾಗ ಸಾಕಷ್ಟು ಆಹಾರ, ರೋಗ ಪೀಡಿತರಿಗೆ ಇರುತ್ತಿರಲಿಲ್ಲ ಮತ್ತು ಸಾಕಷ್ಟು ವೈದ್ಯಕೀಯ ಸಲಕರಣೆಗಳು (ಮಾಸ್ಕ್ ಕೈಚೀಲಗಳು) ಶುಶ್ರೂಷಕರಿಗೆ ಇರುತ್ತಿರಲಿಲ್ಲ. ವೈಎಸ್ಎಸ್ ನ ಸಕಾಲಿಕ ಸಹಾಯದಿಂದಾಗಿ ಕುಟುಂಬಗಳಿಗೆ ಆಹಾರ ಸಾಮಗ್ರಿಗಳು ಆಕ್ಸಿಜನ್ ಕನ್ಸೆಂಟ್ರೇಟರ್ ಮತ್ತು ರಕ್ಷಣೆಗಾಗಿ ವೈದ್ಯಕೀಯ, ಆರೋಗ್ಯದಾಯಕ ವಸ್ತುಗಳ ಸರಬರಾಜು ಆಗಿದೆ. ಈ ಉದಾತ್ತ ಕಾರ್ಯಕ್ರಮದ ಭಾಗವಾಗಲು ನನ್ನ ಹೃದಯ ಆನಂದದಿಂದ ತುಂಬಿ ಹರಿಯುತ್ತಿದೆ.- ಜೆ ಟಿ ವಿ., ಕಣ್ಣೂರ್.
ನಾವು ಧನಸಹಾಯ ಮಾಡಿದವರ ಸಂಬಂಧಿ ಸ್ನೇಹ ವರ್ಗದಿಂದ , ಜೀವದಾಯಕ ವೈದ್ಯಕೀಯ ಸಲಕರಣೆಗಳು ಔಷಧಿಗಳು ಇವುಗಳನ್ನು ನಮ್ಮಿಂದ ಪಡೆದ ಆಸ್ಪತ್ರೆಗಳಿಂದ ಮತ್ತು ಸರಕಾರೇತರ ಸಂಸ್ಥೆಗಳಿಂದ ಹೃದಯಸ್ಪರ್ಶಿ ಸಂದೇಶಗಳು, ಕರೆಗಳನ್ನು ನಾವು ಸ್ವೀಕರಿಸುತ್ತಿದ್ದೇವೆ. ದೇಶಾದ್ಯಂತ ಅನೇಕ ವಾರ್ತಾ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳು ಯೋಗದಾ ಸೊಸೈಟಿಯ ದೇಣಿಗೆಯ ಕಾರ್ಯಕ್ರಮಗಳನ್ನು ಪ್ರಕಟಿಸಿವೆ.
ನಿಸ್ವಾರ್ಥದಿಂದ ಸೇವೆ ಸಲ್ಲಿಸಿದ ಪರಿಹಾರ ಪ್ರಯತ್ನಗಳಲ್ಲಿ ಸಮನ್ವಯಗೊಳಿಸಿದ ಸ್ವಯಂಸೇವಕರಿಗೆ ನಮ್ಮ ಆಳವಾದ ಶ್ಲಾಘನೆಗಳು ಮತ್ತು ಹೃತ್ಪೂರ್ವಕ ಅಭಿನಂದನೆಗಳು. ಈ ಮಾನವೀಯ ಉದ್ದೇಶಕ್ಕಾಗಿ ಧಾರಾಳವಾಗಿ ಕೊಡುಗೆ ನೀಡಿದವರಿಗೆ, ಅವರ ಸಾಧನೆಗಳಿಗೆ, ಪದಗಳು ವಿವರಿಸಲು ಅಸಮರ್ಥ.ಇದೆಲ್ಲಕ್ಕೂ ಮಿಗಿಲಾಗಿ ವಿಶ್ವಾದ್ಯಂತ ಪ್ರಾರ್ಥನಾ ಮಂಡಳಿಗೂ ಮತ್ತು ಪ್ರತಿನಿತ್ಯದ ಆರೋಗ್ಯದಾಯಕ ಪ್ರಾರ್ಥನೆಗಳಿಗೆ ಸೇರಿದವರಿಗೂ, ಸೇರುತ್ತಾ ಇರುವವರಿಗೂ ನಮ್ಮ ಶ್ಲಾಘನೆಗಳು, ಹೃತ್ಪೂರ್ವಕ ಕೃತಜ್ಞತೆಗಳು . ಅವಶ್ಯಕತೆ ಇರುವವರಿಗೆ, ಆರೋಗ್ಯದಾಯಕ ಕಂಪನಗಳನ್ನು ಪಸರಿಸುತ್ತಾ ಉತ್ಸಾಹ ಪೂರಿತ , ಶಕ್ತಿಯುತ ಭಾವನೆಗಳನ್ನು ಪ್ರೇಮ ಭಾವನೆಗಳನ್ನು ಪಸರಿಸುತ್ತಾ ನಾವೆಲ್ಲರೂ ಒಂದಾಗಿ ಪ್ರಾರ್ಥಿಸೋಣ.
ನಮ್ಮ ಗುರುದೇವ ಪರಮಹಂಸ ಯೋಗಾನಂದರು ಹೇಳುತ್ತಾರೆ,”ನಾನು ಚೈತನ್ಯದಿಂದ ಚಲಿಸುತ್ತೇನೆ; ಅಲ್ಲಿ ಧನದ ಭಾವನೆ ಇಲ್ಲ. ಕೇವಲ ಮನುಕುಲದ ಸೇವೆ ಇದೆ; ಹೀಗಾಗಿ ನನ್ನ ಇರುವಿಗೂ, ಸೆಲ್ಫ ರಿಯಲೈಸೇಶನ್ ಫೆಲೋಷಿಪ್ ನ [ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ], ಕಾರ್ಯಗಳ ಇರುವಿಕೆಯ ಸಹಾಯಕ್ಕಾಗಿಯೂ ಭಗವಂತನು ಎಲ್ಲಾ ದಾರಿಗಳನ್ನು ತೆರೆದಿಟ್ಟಿದ್ದಾನೆ.” ಆಧ್ಯಾತ್ಮಿಕವಾಗಿ ಮತ್ತು ಪ್ರಾಪಂಚಿಕವಾಗಿ- ನಮ್ಮವರಿಗೆ ವಿವಿಧ ರೀತಿಯಲ್ಲಿ ಸೇವೆ ಸಲ್ಲಿಸುವಾಗ ಗುರುಗಳು ಹಾಗು ಭಗವಂತನು ನಮಗೆ ಮಾರ್ಗದರ್ಶನ ನೀಡುತ್ತಾ ಉತ್ಸಾಹವನ್ನು ತುಂಬುವರು. ಮತ್ತು ನಮ್ಮ ಮೂಲಕ ಅವರ ಪ್ರೇಮವು ಅವಶ್ಯಕತೆ ಇರುವವರಿಗೆಲ್ಲ ಹರಿಯುವುದು.
ಭಗವಂತನ ಸುತ್ತುವರೆದಿರುವ ಉಪಸ್ಥಿತಿಯಲ್ಲಿ ನೀವು ನೆಲೆಸುವಂತಾಗಲಿ ಹಾಗು ನೀವು ಅವನ ಪ್ರೇಮವನ್ನು, ಒಳಿತನ್ನು ಇತರರಿಗೆ ಪಸರಿಸುವಂತಾಗಲಿ.
ದಿವ್ಯ ಸ್ನೇಹದೊಂದಿಗೆ,
ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ.