ರೈಲಿಗೆ ಮರುನಾಮಕರಣ ಮಾಡಿ ಭಾರತದ ಉನ್ನತ ಅಧಿಕಾರಿಗಳು ಪರಮಹಂಸ ಯೋಗಾನಂದರನ್ನು ಗೌರವಿಸಿದರು.

25 ಜೂನ್‌, 2015

ಜೂನ್‌ 21ರಂದು ಪ್ರಪ್ರಥಮ ಅಂತರರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿ ಪರಮಹಂಸ ಯೋಗಾನಂದರ ಕೊಡುಗೆಯನ್ನು ಗೌರವಿಸಲು ರಾಂಚಿ — 1918ರಲ್ಲಿ ಅವರು ಸ್ಥಾಪಿಸಿದ “ಬದುಕುವುದು ಹೇಗೆ” ಶಾಲೆ ಮತ್ತು ಆಶ್ರಮವಿರುವ ನಗರ — ಮತ್ತು ಕೊಲ್ಕತ್ತಾದ ಹೌರಾ ನಿಲ್ದಾಣದ ನಡುವೆ ಓಡುವ ಒಂದು ಎಕ್ಸ್‌ಪ್ರೆಸ್‌ ರೈಲನ್ನು ಕ್ರಿಯಾ ಯೋಗ ಎಕ್ಸ್‌ಪ್ರೆಸ್‌ ಎಂದು ಮರುನಾಮಕರಣ ಮಾಡಲಾಯಿತು. ಟೈಮ್ಸ್‌ ಆಫ್‌ ಇಂಡಿಯಾದ ಜೂನ್‌ 25ರ ಆನ್‌ಲೈನ್‌ ಆವೃತ್ತಿಯಲ್ಲಿ ವರದಿ ಮಾಡಿರುವಂತೆ, ಈ ರೈಲನ್ನು ಈಗ “ಕ್ರಿಯಾ ಯೋಗ ಎಕ್ಸ್‌ಪ್ರೆಸ್‌” ಎಂದು ಕರೆಯಲಾಗುತ್ತಿದೆ.

ಝಾರ್ಖಂಡಿನ ಇಬ್ಬರು ಉನ್ನತ ಅಧಿಕಾರಿಗಳು — ರಾಂಚಿ ಇರುವ ರಾಜ್ಯ — ಯೋಗವು ನೀಡಿರುವ ಕಾರ್ಯೋಪಯೋಗಿ ಮತ್ತು ಪ್ರಬುದ್ಧ ಬದಲಾವಣೆಗಳು ಮತ್ತು ಜಗದಾದ್ಯಂತ ಯೋಗದ ಅನುಷ್ಠಾನಕ್ಕೆ ಪರಮಹಂಸ ಯೋಗಾನಂದರು ಮಾಡಿರುವ ಮಾರ್ಗದರ್ಶಕ ಪ್ರಭಾವವನ್ನು ಶ್ಲಾಘಿಸಲು ಅವಕಾಶವನ್ನು ತೆಗೆದುಕೊಂಡು ಅವರು ಯೋಗದಾ ಸತ್ಸಂಗ ಸೊಸೈಟಿ ಆಫ್‌ ಇಂಡಿಯಾ (ವೈಎಸ್‌ಎಸ್‌)ಗೆ ಪ್ರತ್ಯೇಕ ಪತ್ರಗಳನ್ನು ಕಳುಹಿಸಿದ್ದಾರೆ.

ಝಾರ್ಖಂಡ್‌ನ ಮುಖ್ಯ ಮಂತ್ರಿಗಳಾದ ಗೌರವಾನ್ವಿತ ರಘುಬರ್‌ ದಾಸ್‌ ವೈಎಸ್‌ಎಸ್‌ ರಾಂಚಿಗೆ ಈ ಕೆಳಗಿನ ಪತ್ರವನ್ನು ಕಳುಹಿಸಿದ್ದಾರೆ:

“ಭಾರತ ಸರ್ಕಾರದ ರೈಲ್ವೆ ಸಚಿವಾಲಯವು ಹಟಿಯಾ-ಹೌರಾ-ಹಟಿಯಾ” ಎಕ್ಸ್‌ಪ್ರೆಸ್‌ ರೈಲನ್ನು ‘ಕ್ರಿಯಾ ಯೋಗ ಎಕ್ಸ್‌ಪ್ರೆಸ್‌’ ಎಂದು ಮರುನಾಮಕರಣ ಮಾಡಿದ್ದನ್ನು ತಿಳಿದು ಬಹಳ ಸಂತೋಷವಾಗಿದೆ. ಇದು ರಾಂಚಿಯ ಮನ್ನಣೆಗೆ, ಪರಮಹಂಸ ಯೋಗಾನಂದಜಿ ಅವರ ಸಾಧನಾ ಭೂಮಿಗೆ ಒಂದು ಹೊಸ ಚಹರೆಯನ್ನು ಕೊಟ್ಟಿದೆ. ಇದಕ್ಕೆ ನಾನು ನಮ್ಮ ಗೌರವಾನ್ವಿತ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರಿಗೆ ಮತ್ತು ನಮ್ಮ ರೈಲ್ವೆ ಸಚಿವರಾದ ಶ್ರೀ ಸುರೇಶ್‌ ಪ್ರಭು ಅವರಿಗೆ ನನ್ನ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಆಧ್ಯಾತ್ಮಿಕ ಬೆಳವಣಿಗೆ, ಸ್ವ-ಶಿಸ್ತು ಮತ್ತು ಶರೀರ ಮತ್ತು ಮನಸ್ಸಿನ ಜೀವಂತಿಕೆಗೆ ಇರುವ ಯೋಗದ ಮಹತ್ವ ಎಲ್ಲರಿಗೂ ತಿಳಿದಿದೆ. ರಾಂಚಿಯಿಂದ ಆರಂಭಿಸಿ, ಪರಮಹಂಸ ಯೋಗಾನಂದಜಿ, ಅವರ ಕ್ರಿಯಾ ಯೋಗದ ಬೋಧನೆಗಳನ್ನು ಭಾರತದಲ್ಲಿ ಮತ್ತು ಪ್ರಪಂಚದಾದ್ಯಂತ ವ್ಯಾಪಕವಾಗಿ ಪ್ರಚುರ ಪಡಿಸಿದರು ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಯೋಗದ ಬಗ್ಗೆ ಒಂದು ಗೌರವವನ್ನು ಜಾಗೃತಗೊಳಿಸಿದರು ಎಂಬುದು ನಮಗೆ ಬಹಳ ಹೆಮ್ಮೆಯ ಸಂಗತಿಯಾಗಿದೆ.

“ಪರಮಹಂಸ ಯೋಗಾನಂದರ ನಿಸ್ವಾರ್ಥ ಪ್ರಯತ್ನಗಳಿಂದಾಗಿ, ಪ್ರಪಂಚದಾದ್ಯಂತ ಕೋಟ್ಯಂತರ ಕ್ರಿಯಾ ಯೋಗದ ಅನುಯಾಯಿಗಳು ಭಗವತ್‌-ಸಂಸರ್ಗದ ಆನಂದವನ್ನು ಅನುಭವಿಸುತ್ತಿದ್ದಾರೆ. ನಮ್ಮ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರ ಪ್ರಯತ್ನಗಳಿಂದಾಗಿ, ಇಡೀ ವಿಶ್ವವು ಜೂನ್‌ 21ರಂದು ಅತ್ಯಂತ ಉತ್ಸಾಹದಿಂದ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಿತು. ಖಂಡಿತವಾಗಿಯೂ ಅವರ ಪ್ರಯತ್ನಗಳು ಯೋಗದ ಪ್ರಸಾರವನ್ನು ಹುರಿದುಂಬಿಸುತ್ತವೆ.

“ಭಾರತ ಮತ್ತು ವಿಶ್ವದ ಇತರ ಭಾಗಗಳಲ್ಲಿ ಯೋಗದ ಬೋಧನೆಗಳನ್ನು ಪ್ರಚುರ ಪಡಿಸುತ್ತಿರುವುದಕ್ಕೆ ನಾನು ಯೋಗದಾ ಸತ್ಸಂಗ ಸೊಸೈಟಿ ಆಫ್‌ ಇಂಡಿಯಾಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಮತ್ತು ಈ ಸಂದರ್ಭದಲ್ಲಿ ಅವರ ತ್ರೈಮಾಸಿಕ ಪತ್ರಿಕೆಯ ಯಶಸ್ವೀ ಪ್ರಕಟಣೆಗಾಗಿ ನನ್ನ ಶುಭಕಾಮನೆಗಳನ್ನು ತಿಳಿಸುತ್ತೇನೆ.”

ಝಾರ್ಖಂಡಿನ ರಾಜ್ಯಪಾಲರಾದ ಘನತೆವೆತ್ತ ದ್ರೌಪದಿ ಮುರ್ಮು ಅವರಿಂದ ಮತ್ತೊಂದು ಪ್ರಶಂಸನೀಯ ಪತ್ರ ತಲುಪಿತು:

“ವ್ಯಾಪಕವಾಗಿ ಯೋಗದ ಸಂದೇಶವನ್ನು ಪ್ರಸಾರ ಮಾಡುವುದಕ್ಕೆ ಸಹಾಯಕವಾಗಿ ಭಾರತ ಸರ್ಕಾರದ ರೈಲ್ವೆ ಸಚಿವಾಲಯವು, ಯೋಗದಾ ಸತ್ಸಂಗ ಸೊಸೈಟಿ ಆಫ್‌ ಇಂಡಿಯಾದ ಕೋರಿಕೆಯ ಮೇರೆಗೆ ಹೌರಾ-ಹಟಿಯಾ-ಹೌರಾ ಎಕ್ಸ್‌ಪ್ರೆಸ್‌ ರೈಲನ್ನು ‘ಕ್ರಿಯಾ ಯೋಗ ಎಕ್ಸ್‌ಪ್ರೆಸ್‌’ ಎಂದು ನಾಮಕರಣ ಮಾಡಿದ್ದನ್ನು ತಿಳಿದು ನನಗೆ ಬಹಳ ಸಂತೋಷವಾಯಿತು.

“ಯೋಗವು ಕೇವಲ ಅರೋಗ್ಯಪೂರ್ಣ ಜೀವನವನ್ನು ಜೀವಿಸುವುದಕ್ಕೆ ಮಾತ್ರ ಒಂದು ಶಕ್ತಿಯುತ ಮಾರ್ಗವಲ್ಲ, ಬದಲಾಗಿ ಅದು ಶಾರೀರಿಕ ವ್ಯಾಧಿಗಳನ್ನು ಕೂಡ ಗುಣಪಡಿಸುತ್ತದೆ. ಅದು ಒಬ್ಬ ವ್ಯಕ್ತಿಯ ಶಾರೀರಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಬೆಳವಣಿಗೆಯಲ್ಲೂ ಒಂದು ಮಹತ್ವದ ಪಾತ್ರವನ್ನು ವಹಿಸುತ್ತದೆ. ಅದು ಶರೀರವನ್ನು ಚೈತನ್ಯದಿಂದ ತುಂಬಿಸುತ್ತದೆ ಮತ್ತು ಮನಃಶಾಂತಿಯನ್ನು ನೀಡುತ್ತದೆ. ಬೃಹತ್‌ ಪ್ರಮಾಣದಲ್ಲಿ ಯೋಗವನ್ನು ಅನುಷ್ಠಾನಗೊಳಿಸುವುದರಿಂದ, ಆರೋಗ್ಯಕರ ಜನರು, ಆರೋಗ್ಯಕರ ಸಮಾಜ ಮತ್ತು ಆರೋಗ್ಯಕರ ರಾಷ್ಟ್ರದ ಕನಸನ್ನು ಸಾಕ್ಷಾತ್ಕರಿಸಿಕೊಳ್ಳಬಹುದು. ನಮ್ಮ ದೇಶವು ತೆಗೆದುಕೊಂಡ ಮುಂದಾಳತ್ವದಿಂದ, ವಿಶ್ವದೆಲ್ಲೆಡೆಯೂ ಅತ್ಯುತ್ಸಾಹದಿಂದ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು ಮತ್ತು ಈ ಸಂದರ್ಭದಲ್ಲಿ ಆಯೋಜಿಸಲ್ಪಟ್ಟ ಶಿಬಿರಗಳಲ್ಲಿ ಜನರು ಸಕ್ರಿಯವಾಗಿ ಭಾಗವಹಿಸಿದರು ಎಂಬುದು ಬಹಳ ಹೆಮ್ಮೆಯ ವಿಷಯವಾಗಿದೆ.

“ರಾಷ್ಟ್ರೀಯವಾಗಿ ಮತ್ತು ಅಂತರರಾಷ್ಟ್ರೀಯವಾಗಿ ಯೋಗದ ಸಂದೇಶವನ್ನು ಪ್ರಸಾರ ಮಾಡಲು ಪರಮಹಂಸ ಯೋಗಾನಂದಜಿಯವರು ಸ್ಥಾಪಿಸಿದ ಯೋಗದಾ ಸತ್ಸಂಗ ಸೊಸೈಟಿ ಆಫ್‌ ಇಂಡಿಯಾ ಮಾಡುತ್ತಿರುವ ಕಾರ್ಯವನ್ನು ನಾನು ಬಹಳ ಪ್ರಶಂಸಿಸುತ್ತೇನೆ.”

ರೈಲಿನ ಹೊಸ ಹೆಸರು ಸಾಂಕೇತಿಕವಾಗಿ ಸೂಕ್ತವಾಗಿದೆ. ರಾಂಚಿ ಶಾಲೆ ಮತ್ತು ಆಶ್ರಮವನ್ನು ಪರಮಹಂಸ ಯೋಗಾನಂದರು ಸ್ಥಾಪಿಸುತ್ತಿದ್ದ ಕಾಲದಲ್ಲಿ, ಪರಮಹಂಸಜಿ ಪದೇಪದೇ ರಾಂಚಿ ಮತ್ತು ಕೊಲ್ಕತ್ತಾ ನಡುವೆ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಕ್ರಿಯಾ ಯೋಗವನ್ನು ಪಶ್ಚಿಮಕ್ಕೆ, ಹಾಗೂ ಆ ಮೂಲಕ ಇಡೀ ಪ್ರಪಂಚಕ್ಕೆ ಪರಿಚಯಿಸುವ ಸಮಯ ಬಂದಿದೆ ಎಂಬ ದಿವ್ಯ ನೋಟವನ್ನು ಕಂಡ ಬಳಿಕ ಜುಲೈ 1920ರಂದು ಅವರು ರಾಂಚಿಯಲ್ಲಿ ರೈಲನ್ನು ಹತ್ತಿ ಮಾಡಿದ ಪ್ರಯಾಣ ಪ್ರಾಯಶಃ ಬಹಳ ಮಹತ್ವವಾದದ್ದು.

ಇದನ್ನು ಹಂಚಿಕೊಳ್ಳಿ